ನಟಿ ಅದಿತಿ ಪ್ರಭುದೇವ್ ನಟನೆಯಲ್ಲಿ ಮಾತ್ರವಲ್ಲ ಅಪ್ಪಟ್ಟ ಗೃಹಿಣಿಯಾಗಿಯೂ ಕಾಣಿಸಿಕೊಂಡವರು. ಅಡುಗೆ ಮನೆಯಲ್ಲಿ ಇವರದ್ದು ಎತ್ತಿದ ಕೈ. ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ಹೊಳೆಯುವ ತ್ವಚೆ ಹಾಗೂ ಕೂದಲನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಕಡಲೆಬೇಳೆ, ತೊಗರಿ ಬೇಳೆ, ಹೆಸರುಕಾಳು, ತುಸು ಅಕ್ಕಿ, ಸೀಗೆಕಾಯಿ, ಬೆಟ್ಟದ ನೆಲ್ಲಿಕಾಯಿ, ಬಾದಾಮಿ, ರೋಸ್ ಪೌಡರ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುಸು ಬಿಸಿ ಮಾಡಿ ಮಿಕ್ಸಿಯಲ್ಲಿ ರುಬ್ಬಿ ಸಂಗ್ರಹಿಸಿಡಿ.
ತುಸು ಮುಲ್ತಾನಿಮಿಟ್ಟಿ ಸೇರಿಸಿ ಸ್ನಾನಕ್ಕೆ ಹೊರಡುವ ಮುನ್ನ ರೋಸ್ ವಾಟರ್ ನಲ್ಲಿ ಈ ಪುಡಿಯನ್ನು ಕಲಸಿ ಪೇಸ್ಟ್ ತಯಾರಿಸಿ. ಇದನ್ನು ಮುಖ, ಕೈ ಕಾಲು, ಕುತ್ತಿಗೆಯ ಭಾಗಕ್ಕೆ ಹಚ್ಚಿ 15 ನಿಮಿಷ ಬಳಿಕ ಸ್ನಾನ ಮಾಡಿದಾಗ ತ್ವಚೆಯ ಕಲೆಗಳು, ಟ್ಯಾನ್ ಗುರುತುಗಳು ದೂರವಾಗುತ್ತವೆ ಎನ್ನುತ್ತಾರವರು.
ಒಂದು ಲೋಟ ನೀರಿಗೆ ಮೆಂತೆ ಹಾಗೂ ಟೀ ಪುಡಿ ಹಾಕಿ ಕುದಿಸಿ ಸೋಸಿ ಇಟ್ಟುಕೊಳ್ಳಬೇಕು. ಇದಕ್ಕೆ ಸೀಗೇಕಾಯಿ ಪೌಡರ್ ಹಾಗೂ ಹೆನ್ನಾ ಪೌಡರ್ , ಮೊಸರು ಹಾಕಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ತಲೆಗೆ ಹಚ್ಚಿ. ನಾಲ್ಕು ಗಂಟೆ ಬಳಿಕ ಸ್ನಾನ ಮಾಡುವುದರಿಂದ ಮಹೆಂದಿ ಹಚ್ಚಿಕೊಂಡ ಲಾಭಗಳೇ ಕೂದಲಿಗೆ ಸಿಗುತ್ತವೆ ಎನ್ನುತ್ತಾರವರು.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…