ಸರಿಯಾದ ಸಮಯದಲ್ಲಿ ನೀರು ಕುಡಿಯುವುದರಿಂದ ದೇಹತೂಕ ಇಳಿಸುವ ಪ್ರಕ್ರಿಯೆ ಮತ್ತಷ್ಟು ಸುಲಭವಾಗುತ್ತದೆ, ಹಾಗಿದ್ದರೆ ಆ ಸರಿಯಾದ ಸಮಯ ಯಾವುದು ಎಂದಿರಾ…
ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು. ಹಲವು ಅಧ್ಯಯನಗಳು ಬೆಳಗ್ಗೆ ಎದ್ದ ತಕ್ಷಣ ಒಂದರಿಂದ ಎರಡು ಲೋಟ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎಂಬುದನ್ನು ದೃಢಪಡಿಸಿದೆ.
ರಾತ್ರಿ ಮಲಗಿದ ಬಳಿಕ ಬೆಳಗಿನ ತನಕ ದೇಹ ನಿರ್ಜಲೀಕರಣ ಸ್ಥಿತಿಯಲ್ಲಿರುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಬೆಳಗಿನ ಚಹಾ ಕಾಫಿ ಸೇವನೆಗೆ ಮುನ್ನ ಒಂದರಿಂದ ಎರಡು ಗ್ಲಾಸ್ ನೀರು ಕುಡಿಯುವ ಅಭ್ಯಾಸವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಿ.
ವಿಪರೀತ ಹಸಿವಾಗುತ್ತಿದೆ ಎಂದ ತಕ್ಷಣ ಕ್ಯಾಂಟೀನ್ ಅಥವಾ ಹೋಟೆಲ್ ಗೆ ಹೋಗುವ ಬದಲು ಒಂದೆರಡು ಲೋಟ ನೀರನ್ನು ಗಟಗಟನೆ ಕುಡಿಯಿರಿ. ಇದು ನಿಮ್ಮ ಹಸಿವನ್ನು ತಣಿಸುತ್ತದೆ. ಅನಗತ್ಯ ಆಹಾರ ಸೇವನೆಯಿಂದ ದೇಹದ ಕೊಬ್ಬನ್ನು ಹೆಚ್ಚಿಸುವ ಬದಲು ನೀರು ಕುಡಿಯುವ ಮೂಲಕ ದೇಹದ ತೂಕ ಕಡಿಮೆ ಮಾಡಿಕೊಳ್ಳಿ. ವ್ಯಾಯಾಮದಿಂದ ಮರಳಿದ ಬಳಿಕ ನೀರು ಕುಡಿಯಲು ಮರೆಯದಿರಿ.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…