ತೆಂಗಿನ ಹಾಲಿನಿಂದ ನಿಮ್ಮ ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ನೋಡಿ!

ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಲು ಹಲವು ಉಪಾಯಗಳನ್ನು ಪ್ರಯತ್ನಿಸಿ ಸೋತಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ ತೆಂಗಿನ ಹಾಲಿನಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು.

ಸಾಮಾನ್ಯವಾಗಿ ಅಡುಗೆಗೆ ಬಳಸುವ ತೆಂಗಿನ ಹಾಲು ನೈಸರ್ಗಿಕ ಮಾಯಿಸ್ಚರೈಸರ್ ಆಗಿದೆ. ಇದು ದುರ್ಬಲ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಶುಷ್ಕತೆ, ಸೀಳು ತುದಿ ಹಾಗೂ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಅತಿಯಾಗಿ ಕೂದಲು ಉದುರುತ್ತಿದ್ದರೆ ತೆಂಗಿನ ಹಾಲಿಗೆ ಚಿಟಿಕೆ ಕರ್ಪೂರವನ್ನು ಬೆರೆಸಿ ಇದನ್ನು ಕೂದಲಿನ ಬೇರುಗಳಿಗೆ ಹಚ್ಚಿಕೊಳ್ಳಿ. ಒಂದರಿಂದ ಎರಡು ಗಂಟೆ ಬಳಿಕ ಕೂದಲನ್ನು ಮೃದುವಾದ ಹಾಗೂ ಉತ್ತಮ ಗುಣಮಟ್ಟದ ಶಾಂಪುನಿಂದ ತೊಳೆಯಿರಿ.

ಅದೇ ರೀತಿ ಶಾಂಪೂ ಮಾಡಿದ ಬಳಿಕ ಕಂಡಿಶನರ್ ಬದಲಿಗೆ ತೆಂಗಿನಕಾಯಿ ಹಾಲನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಕೂದಲು ಶುಷ್ಕವಾಗುವ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಕೂದಲು ವಿಶೇಷ ಹೊಳಪು ಪಡೆದುಕೊಳ್ಳುತ್ತದೆ. ಹೆಚ್ಚಿನ ಲಾಭಕ್ಕಾಗಿ ವಾರಕ್ಕೆ ಎರಡು ಬಾರಿ ಇದನ್ನು ಪುನರಾವರ್ತಿಸಬಹುದು.

ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ ಹಾಗೂ ತೆಂಗಿನ ಹಾಲನ್ನು ಬೆರೆಸಿ ಕೂದಲಿಗೆ ಅನ್ವಯಿಸಿ ಬಳಿಕ ತೊಳೆಯುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಗಟ್ಟಬಹುದು.

 

Pavitra Shetty

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago