Kannada Duniya

ಆರತಿ ಮಾಡುವಾಗ ಈ ವಿಧಾನ ಪಾಲಿಸಿ….!

ಆರತಿ ಮಾಡುವುದು ಹಿಂದೂ ಪೂಜೆಯ ಒಂದು ವಿಧಾನವಾಗಿದೆ. ಇದರಲ್ಲಿ ಉರಿಯುವ ಜ್ವಾಲೆಯ ಅಥವಾ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಕಿ ವಿಗ್ರಹದ ಮುಂದೆ ವಿಶೇಷ ರೀತಿಯಲ್ಲಿ ತಿರುಗಿಸಲಾಗುತ್ತದೆ. ಈ ಆರತಿಯನ್ನು ಮಾಡುವಾಗ ಈ ನಿಯಮ ಪಾಲಿಸಿದರೆ ದೇವರ ಅನುಗ್ರಹ ದೊರೆಯುತ್ತದೆ.

ಆರತಿ ಮಾಡುವಾಗ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಅವೆಲ್ಲವೂ ವಿಶೇಷ ಅರ್ಥವನ್ನು ಹೊಂದಿದೆ. ಆರತಿ ಮಾಡುವುದರಲ್ಲಿ ಮಾತ್ರವಲ್ಲ ಭಾಗವಹಿಸುವುದರಿಂದ ಕೂಡ ಪುಣ್ಯ ಸಿಗುತ್ತದೆ.

ಯಾವುದೇ ದೇವತೆಗೆ ಆರತಿಯನ್ನು ಮಾಡುವಾಗ ದೇವರಿಗೆ ಮೂರು ಬಾರಿ ಹೂಗಳನ್ನು ಅರ್ಪಿಸಬೇಕು. ಹಾಗೇ ಆ ವೇಳೆ ನಗಾರಿ, ವಾದ್ಯಗಳನ್ನು ಮೊಳಗಿಸಿದರೆ ಒಳ್ಳೆಯದು.

ಕನ್ಯಾ ಸಂಕ್ರಾಂತಿಯ ದಿನ ಈ ಕೆಲಸ ಮಾಡಿದರೆ ನೀವು ಸಾಲದಿಂದ ಮುಕ್ತರಾಗುತ್ತೀರಿ…!

ಆರತಿಯನ್ನು ಸಾಮಾನ್ಯವಾಗಿ ದಿನಕ್ಕೆ 5 ಬಾರಿ ಮಾಡಬಹುದು. ಒಂದು ಪಾತ್ರೆಯಲ್ಲಿ ಶುದ್ಧ ಹಸುವಿನ ತುಪ್ಪವನ್ನು ತೆಗೆದುಕೊಂಡು ಅದರಲ್ಲಿ ಬೆಸ ಸಂಖ್ಯೆಯ ದೀಪಗಳನ್ನು ಬೆಳಗಿಸುವ ಮೂಲಕ ಆರತಿ ಮಾಡಲಾಗುತ್ತದೆ. ಇದಲ್ಲದೇ ಕರ್ಪೂರದ ಆರತಿಯನ್ನು ಮಾಡಬಹುದು. ಸಾಮಾನ್ಯವಾಗಿ ಆರತಿಯನ್ನು 5 ದೀಪಗಳಲ್ಲಿ ಮಾಡಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...