Kannada Duniya

ಸಂಗಾತಿಗಳಿಬ್ಬರು ಕೆಲಸ ಮಾಡುತ್ತಿದ್ದರೆ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಹೀಗೆ ನಿರ್ವಹಿಸಿಕೊಂಡು ಹೋಗಿ

ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರು ಇಬ್ಬರು ಹೊರಗಡೆ ಕೆಲಸಕ್ಕೆ ಹೋಗುತ್ತಾರೆ. ಆಗ ಮಾತ್ರ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯ. ಆದರೆ ಈ ಕೆಲಸದ ಒತ್ತಡದಿಂದ ಅವರು ಹೆಚ್ಚು ವೃತ್ತಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ಅವರ ವೈವಾಹಿಕ ಜೀವನದಲ್ಲಿ ಯಾವುದೇ ಸಾಮರಸ್ಯ ಇರುವುದಿಲ್ಲ. ಹಾಗಾಗಿ ಇಂತಹ ದಂಪತಿಗಳು ವೃತ್ತಿಪರ ಮತ್ತು ವೈಯಕ್ತಿಯ ಜೀವನ ಎರಡನ್ನು ನಿರ್ವಹಿಸಲು ಈ ಸಲಹೆ ಪಾಲಿಸಿ.

ನೀವು ಸಂಬಂಧದಲ್ಲಿದ್ದರೆ ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿದಂತಹ ಯಾವುದೇ ವಿಚಾರಗಳನ್ನು ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಇದರಿಂದ ನಿಮ್ಮ ಜೀವನದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.

ಹಾಗೇ ಇಬ್ಬರು ಕೆಲಸಕ್ಕೆ ಹೋಗುವ ಕಾರಣದಿಂದ ಮನೆಗೆಲಸದ ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಳ್ಳಿ. ಬೆಳಿಗ್ಗೆಯಿಂದ ಸಂಜೆಯ ತನಕ ಏನೆಲ್ಲಾ ಕೆಲಸಗಳು ಬರುತ್ತದೆಯೋ ಅವುಗಳನ್ನು ಇಬ್ಬರು ಸೇರಿ ಮಾಡಿ.

ಹಾಗೇ ಕಚೇರಿಯ ಕೆಲಸ ಮುಗಿಸಿ ಬಂದ ನಂತರ ಮನೆಯಲ್ಲಿ ಇಬ್ಬರು ಕಚೇರಿಯ ಕೆಲಸಗಳನ್ನು ಬದಿಗೊತ್ತಿ ಒಟ್ಟಿಗೆ ಕುಳಿತು ಮಾತನಾಡಿ, ಊಟ ಮಾಡಿ, ಟಿವಿ ನೋಡಿ. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...