Kannada Duniya

ವಿಚ್ಛೇದನಕ್ಕೆ ಜಗಳ ಮಾತ್ರವಲ್ಲ ಈ ತಪ್ಪುಗಳು ಕಾರಣವಂತೆ….!

ಸಾಮಾನ್ಯವಾಗಿ ದಂಪತಿಗಳ ವಿಚ್ಛೇದನಕ್ಕೆ ಕಾರಣ ಜಗಳ ಮತ್ತು ತಪ್ಪು ತಿಳುವಳಿಕೆಗಳು ಕಾರಣವೆಂಬುದು ಎಲ್ಲರ ಭಾವನೆ. ಆದರೆ ದಂಪತಿಗಳ ನಡುವೆ ಬಿರುಕು ಮೂಡಲು ಹಲವು ಕಾರಣಗಳಿವೆ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ.

ದಂಪತಿಗಳು ಸಂಬಂಧದಲ್ಲಿ ಒಬ್ಬರನೊಬ್ಬರು ಗೌರವಿಸುವುದು ಅಗತ್ಯ. ಆದರೆ ಮಹಿಳೆಯರಿಗೆ ಕೆಲವೊಮ್ಮೆ ಸಂಬಂಧದಲ್ಲಿ ಗೌರವ ಸಿಗುವುದಿಲ್ಲ. ಸಂಗಾತಿಯನ್ನು ಕೀಳಾಗಿ ಕಾಣುತ್ತಾರೆ. ಇದು ಅವರ ನಡುವೆ ವಿಚ್ಛೇದನಕ್ಕೆ ಕಾರಣವಾಗಬಹುದು.

ಸಂಬಂಧದಲ್ಲಿ ಜಗಳ ಸಾಮಾನ್ಯ. ಆದರೆ ಅದನ್ನು ಸರಿಪಡಿಸಿಕೊಂಡು ಹೋಗಬೇಕು. ನಿಮ್ಮ ನಡುವೆ ಪ್ರೀತಿ ಮತ್ತು ಅನ್ಯೋನ್ಯತೆ ಕೊರತೆಯಾದರೆ ಇದರಿಂದ ಸಂಬಂಧ ಹಾಳಾಗುತ್ತದೆಯಂತೆ.

ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದಾಸವಾಳ ಹೂವಿನಿಂದ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ….!

ದಂಪತಿಗಳು ಒಬ್ಬರನೊಬ್ಬರು ಸರಿಯಾಗಿ ತಿಳಿದಿರಬೇಕು. ಒಬ್ಬರ ಸಮಸ್ಯೆಯನ್ನುಇನ್ನೊಬ್ಬರು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಅವರ ನಡುವೆ ಆಗಾಗ ಸಂವಹನ ನಡೆಸುತ್ತಿರಬೇಕು. ಇಲ್ಲವಾದರೆ ಇದರಿಂದ ಸಂಬಂಧ ಹಾಳಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...