ಮದುವೆಯು ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಈ ಬದಲಾವಣೆ ಹುಡುಗ, ಹುಡುಗಿ ಇಬ್ಬರಲ್ಲೂ, ಎಲ್ಲಾ ರೀತಿಯಲ್ಲೂ ಆಗುತ್ತದೆ. ಹಾಗಾಗಿ ಹುಡುಗ, ಹುಡುಗಿಯರು ಮದುವೆಯ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಆಮೇಲೆ ನಿರಾಶೆ ಅನುಭವಿಸಬೇಕಾಗುತ್ತದೆ.
ಪ್ರತಿಯೊಬ್ಬ ಹುಡುಗ, ಹುಡುಗಿಯು ತಮ್ಮ ಸಂಗಾತಿಗೆ ಚೆನ್ನಾಗಿ ಕಾಣುವಂತಿರಬೇಕು. ಅವರ ವ್ಯಕ್ತಿತ್ವವು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಮದುವೆಗೂ ಮುನ್ನ ನಿಮ್ಮ ಅಂದದ ಕಡೆ ಗಮನ ಕೊಡಿ. ಈ ಶೃಂಗಾರವು ಮಾನಸಿಕ ಮತ್ತು ದೈಹಿಕ ನೋಟದಿಂದ ಕೂಡಿರಬೇಕು.
ಅಜ್ಮೀರ್ ಗೆ ಭೇಟಿ ನೀಡಿದಾಗ ಈ ಅತ್ಯಾಕರ್ಷಕ ಸ್ಥಳಗಳಿಗೆ ಭೇಟಿ ನೀಡಿ
ಮದುವೆಗೂ ಮುನ್ನ ಸಂಗಾತಿಯೊಂದಿಗೆ ಸ್ವಲ್ಪ ಸಮಯದವರೆಗೆ ಸಂಬಂಧವನ್ನು ಹೊಂದಿರುವುದು ಉತ್ತಮ. ಇದರಿಂದ ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಬಹುದು. ಇದರಿಂದ ಮದುವೆಯ ನಂತರ ಯಾವುದೇ ಸಮಸ್ಯೆ ಬರಲ್ಲ. ಒಂದು ವೇಳೆ ಆ ವ್ಯಕ್ತಿಯ ಜೊತೆ ಬಾಳಲು ಸಾಧ್ಯವಿಲ್ಲ ಎನಿಸಿದರೆ ಆ ಸಂಬಂಧವನ್ನು ಮುರಿಯಬಹುದು.
ಮದುವೆಯಾಗುವ ಸಂಗಾತಿಯು ಆರ್ಥಿಕವಾಗಿ ಸದೃಢರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಿ. ಯಾಕೆಂದರೆ ಮದುವೆಯ ಬಳಿಕ ಜವಾಬ್ದಾರಿ ಮತ್ತು ವೆಚ್ಚಗಳು ಹೆಚ್ಚಾಗುತ್ತದೆ. ಹಾಗಾಗಿ ಅದಕ್ಕಾಗಿ ಅವರ ಬಳಿ ಸ್ವಲ್ಪ ಹಣವಿದ್ದರೆ ಉತ್ತಮ.