Kannada Duniya

ಮಕ್ಕಳ ನಡವಳಿಕೆ ಮೇಲೆ ಪೋಷಕರ ಗಮನವಿರಲಿ….!

ಈಗಿನ ಕಾಲದಲ್ಲಿ ಮಕ್ಕಳಿಗೆ ಉತ್ತಮ ನಡವಳಿಕೆ ಹೇಳಿಕೊಡಲು ಪೋಷಕರಿಗೆ ಸಮಯವಿರುವುದಿಲ್ಲ. ಹೆಚ್ಚಿನ ಕುಟುಂಬಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ಅಜ್ಜ-ಅಜ್ಜಿ ಇರುವುದು ವಿರಳವಾಗಿದೆ. ಹೀಗಿರುವಾಗ ಕೆಲವು ಮಕ್ಕಳು ಸರಿಯಾದ ಪ್ರೀತಿ, ಮಾರ್ಗದರ್ಶನ ಸಿಗದೆ ಕೆಟ್ಟ ನಡವಳಿಕೆ ಬೆಳೆಸಿಕೊಳ್ಳುತ್ತಾರೆ.

ನೆಂಟರಿಷ್ಟರು ಯಾವಾಗಲಾದರೂ ಮನೆಗೆ ಬಂದಾಗ ಮಕ್ಕಳನ್ನು ಮಾತನಾಡಿಸಿದಾಗ ಮಾತನಾಡಿಸದೆ ಇರುವುದು, ಎದುರುತ್ತರ ಕೊಡುವುದು, ಎಲ್ಲರೆದುರು ಹಟ, ಕೋಪ ಪ್ರದರ್ಶಿಸುವುದು ಕೆಲವೊಮ್ಮೆ ಪೋಷಕರನ್ನು ಪೇಚಿಗೆ ಸಿಲುಕಿಸುತ್ತದೆ. ಮಕ್ಕಳಿಗೆ ಕೆಲವು ಉತ್ತಮ ನಡವಳಿಕೆ ಹೇಳಿಕೊಡುವುದು ಪಾಲಕರ ಕರ್ತವ್ಯ. ಮಕ್ಕಳ ಪಾಲನೆಗೆ ಸಾಧ್ಯವಾದಷ್ಟು ಸಮಯ ನೀಡಲೇಬೇಕು.

ಮಕ್ಕಳು ತಂದೆ ತಾಯಿಯನ್ನು ನೋಡಿ ಸಾಕಷ್ಟು ವಿಷಯಗಳನ್ನು ಕಲಿಯುತ್ತಾರೆ ಮತ್ತು ಅನುಸರಿಸುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ, ಕೆಲಸದೊತ್ತಡವನ್ನು ಮಕ್ಕಳ ಮೇಲೆ ತೋರಿಸಬೇಡಿ.

ಮಕ್ಕಳು ತಪ್ಪು ಮಾಡಿದಾಗ ಸಾಧ್ಯವಾದಷ್ಟು ತಾಳ್ಮೆ ತೆಗೆದುಕೊಂಡು ಅವರ ತಪ್ಪನ್ನು ತಿಳಿ ಹೇಳುವ ಕೆಲಸ ಮಾಡಿ. ರೇಗುವುದು, ಗದರುವುದನ್ನು ಕಡಿಮೆ ಮಾಡಿ ಮಕ್ಕಳು ಭಯಬೀಳುವಂತೆ ಮಾಡಬೇಡಿ.

ಮಕ್ಕಳಿಗೆ ಬೇರೆಯವರನ್ನು ಗೌರವಿಸಲು ಹೇಳಿಕೊಡಿ. ಮಕ್ಕಳಎದುರು ಜಗಳವಾಡಬೇಡಿ, ಹಿರಿಯರ ಮೇಲೆ ರೇಗಬೇಡಿ. ಮಕ್ಕಳು ಎಲ್ಲದನ್ನೂ ಗಮನಿಸುತ್ತಿರುತ್ತಾರೆ ಮತ್ತು ಅದನ್ನೇ ಕಲಿಯುತ್ತಾರೆ. ಮಕ್ಕಳ ಜತೆ ಸಾಧ್ಯವಾದಷ್ಟು ಮಾತುಕತೆ ನಡೆಸಿ. ಅವರ ಪ್ರಶ್ನೆಗಳಿಗೆ ಕೋಪಗೊಳ್ಳದೆ ಉತ್ತರಿಸಿ.

ಮಳೆಗಾಲದ ಸೋಂಕುಗಳಿಂದ ದೂರವಿರಲು ಇವುಗಳನ್ನು ಆಹಾರದಲ್ಲಿ ಸೇರಿಸಿ..!

ಮಕ್ಕಳನ್ನು ಇತರ ಮಕ್ಕಳೊಂದಿಗೆ ಬೆರೆಯಲುಬಿಡಿ. ಜಗಳವಾಡುವುದು, ಹೊಡೆಯುವುದು ಕಂಡುಬಂದರೆ ಬುದ್ಧಿಹೇಳಿ. ಪ್ರೀತಿಯಿಂದಿರಲು ಸೂಚಿಸಿ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡಲು ಉದಾಹರಣೆಗೆ ಶಾಲೆಯಲ್ಲಿ ಸಹಪಾಠಿಗಳು ಬಿದ್ದರೆ ಅವರನ್ನು ಎಬ್ಬಿಸಲು, ತಮ್ಮಲ್ಲಿರುವ ವಸ್ತುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕಲಿಸಿ. ಮಕ್ಕಳ ಮನಸಲ್ಲಿ ಇನ್ನೊಬ್ಬರ ಬಗ್ಗೆ ದ್ವೇಷ ಬಿತ್ತುವ ಕೆಲಸ ಮಾಡಬೇಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...