
ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಹಲವರು ಹೇಳಿರುವುದು ನಿಮ್ಮ ಕಿವಿಗೂ ಬಿದ್ದಿರಬಹುದು. ಕೆಲವೊಮ್ಮೆ ಆಕೆಗೆ ನೀವು ನೀಡುವ ದುಬಾರಿ ಉಡುಗೊರೆಗಿಂತ ಸಣ್ಣ ಗಿಫ್ಟು ಬಹಳ ಇಷ್ಟವಾಗುತ್ತದೆ. ಹಾಗಿದ್ದರೆ ನಿಮ್ಮ ಸಂಗಾತಿಗೆ ಯಾವುದು ಇಷ್ಟ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು?
ಪತ್ನಿಯಾದವಳು ತನ್ನನ್ನು ಗೌರವಿಸುವ ಪತಿಯನ್ನು ಅತಿಯಾಗಿ ಇಷ್ಟಪಡುತ್ತಾಳೆ. ಯಾವುದೇ ಸಂದರ್ಭದಲ್ಲಿ ಪತಿ ತನ್ನ ಬೆನ್ನೆಲುಬಾಗಿ ನಿಲ್ಲುವುದನ್ನು ಆಕೆ ಬಯಸುತ್ತಾಳೆ.
ನಿಮ್ಮ ಸಂಗಾತಿ ನೀವು ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂದು ಬಯಸುತ್ತಾಳೆ. ಆಕೆಯ ಜೊತೆಗಿದ್ದಾಗ ನೀವು ಮೊಬೈಲ್ ನೋಡುತ್ತಾ ಕುಳಿತಿರುವುದು ಖಂಡಿತ ಆಕೆಗೆ ಇಷ್ಟವಾಗುವುದಿಲ್ಲ.
ಈ ಸುಲಭವಾದ ವ್ಯಾಯಾಮಗಳನ್ನು ಮಾಡುವುದರಿಂದ ಕೀಲು ಬಲವಾಗುತ್ತದೆಯಂತೆ…!
ಸಾರ್ವಜನಿಕ ಸ್ಥಳಗಳಲ್ಲಿ ಸಂಗಾತಿಯ ಕೈ ಹಿಡಿದುಕೊಂಡು ನಡೆದಾಡುವುದು ಕೂಡ ಆಕೆಗೆ ವಿಶೇಷ ಭಾವನೆ ಮೂಡಿಸುತ್ತದೆ. ಸುಳ್ಳು ಹೇಳುವ ಪತಿಯನ್ನು ಆಕೆ ಪ್ರೀತಿಸುವುದಿಲ್ಲ.
ನೀವು ಆಕೆಯನ್ನು ಓರ್ವ ಸ್ನೇಹಿತೆಯಂತೆ ನೋಡಿಕೊಂಡರೆ ಸಾಕು ಎಂದು ಆಕೆ ಬಯಸುತ್ತಾಳೆ. ಪ್ರತಿ ಬಾರಿ ಹೊಗಳುವುದು ಸಾಧ್ಯವಿಲ್ಲದಿದ್ದರೂ ಆಕೆಗೆ ತಾನು
ವಿಶೇಷ ಎಂಬ ಭಾವನೆ ಮೂಡಿಸುವಂತೆ ವ್ಯವಹರಿಸುವುದು ಕೂಡ ಮುಖ್ಯ. ಹೀಗಾಗಿ ನೀವು ಕೊಡುವ ಗಿಫ್ಟ್ ಗಿಂತ ಆಕೆಯ ಮನಸ್ಸನ್ನು ಅರಿತುಕೊಂಡು ಬದುಕಿದರೆ ಜೀವನ ಸುಖಮಯವಾಗಿರುತ್ತದೆ.