Kannada Duniya

ನಿಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಈ ವಿಷಯ ಕಲಿಸಿಕೊಟ್ಟರೆ ನಿಮ್ಮ ಘನತೆ ಹೆಚ್ಚಾಗುತ್ತದೆ…!

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಬುದ್ಧಿವಂತರು ಮತ್ತು ಸುಸಂಸ್ಕೃತರಾಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಪೋಷಕರು ಬಾಲ್ಯದಿಂದಲೇ ಮಕ್ಕಳನ್ನು ಚುರುಕಾಗಿ ಮತ್ತು ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ. ಹಾಗಾಗಿ ನೀವು ನಿಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಈ ವಿಷಯ ಕಲಿಸಿಕೊಟ್ಟರೆ ನಿಮ್ಮ ಘನತೆ ಹೆಚ್ಚಾಗುತ್ತದೆ.

ನಿಮ್ಮ ಮಕ್ಕಳಿಗೆ ‘ಧನ್ಯವಾದ’ ಹೇಳಲು ಕಲಿಸಿಕೊಡಿ. ಅವರು ಬೇರೆಯವರಿಂದ ಸಹಾಯ ಪಡೆದರೆ ಅವರಿಗೆ ಧನ್ಯವಾದ ತಿಳಿಸುವಂತೆ ಹೇಳಿಕೊಡಿ. ಇದರಿಂದ ನಿಮ್ಮ ಘನತೆ ಹೆಚ್ಚಾಗುತ್ತದೆ.

ನಿಮ್ಮ ಮಕ್ಕಳಿಗೆ ಬಾಲ್ಯದಿಂದ ಮನವಿ ಮಾಡಿಕೊಳ್ಳುವಂತಹ ಬುದ್ದಿಯನ್ನು ಹೇಳಿಕೊಡಿ. ಅವರು ಬೇರೆಯವರ ಬಳಿ ಸಹಾಯ ಕೇಳುವಾಗ ‘ದಯವಿಟ್ಟು’ ಎಂಬ ಮನವಿ ಮಾಡುವಂತಹ ಪದವನ್ನು ಬಳಸುವಂತೆ ಹೇಳಿಕೊಡಿ. ಇದರಿಂದ ನಿಮ್ಮ ಇಮೇಜ್ ಹೆಚ್ಚುತ್ತದೆ.

ನಿಮ್ಮ ಮಗು ಎಷ್ಟೇ ಬುದ್ದಿವಂತನಾಗಿದ್ದರೂ ಕೂಡ ಅವರು ‘ಅನುಮತಿ’ ಪಡೆಯುವ ಬುದ್ದಿಯನ್ನು ಕಲಿಸಿ. ಅವರು ಎಲ್ಲಿಗಾದರೂ ಹೋಗುವಾಗ ಪೋಷಕರ ಅನುಮತಿ ಪಡೆಯುವಂತೆ ತಿಳಿಸಿಕೊಡಿ. ಅವರ ಈ ಗುಣವನ್ನು ಕಂಡು ಎಲ್ಲರೂ ಮೆಚ್ಚುತ್ತಾರೆ.

ತಪ್ಪಾದ ಸಮಯದಲ್ಲಿ ನೀವು ಮಾಡುವಂತಹ ಈ ಕೆಲಸ ಕುಟುಂಬಕ್ಕೆ ತೊಂದರೆಯನ್ನುಂಟುಮಾಡುತ್ತದೆ

ನಿಮ್ಮ ಮಕ್ಕಳು ಏನಾದರೂ ತಪ್ಪು ಮಾಡಿದರೆ ‘ಕ್ಷಮಿಸಿ’ ಎಂದು ಹೇಳುವ ಗುಣವನ್ನು ಹೇಳಿಕೊಡಿ. ಇದರಿಂದ ಅವರ ಇಮೇಜ್ ಹಾಳಾಗುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...