
ಆರೋಗ್ಯಕ್ಕಿಂತ ಹೆಚ್ಚಿನ ಸಂಪತ್ತಿಲ್ಲ. ಯಾಕೆಂದರೆ ಯಾವುದೇ ಸಂಪತ್ತಿನಿಂದ ರೋಗಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹಲವು ಬಾರಿ ವ್ಯಕ್ತಿಯ ಕರ್ಮ ಮತ್ತು ಗ್ರಹಗಳ ಸ್ಥಾನಗಳಿಂದ ರೋಗಗಳು ಬರುತ್ತದೆ. ಅದನ್ನು ನಿವಾರಿಸಲು ಈ ಪರಿಹಾರ ಮಾಡಿ.
ಒಂದು ಪಾತ್ರೆಯಲ್ಲಿ ನೀರು ಮತ್ತು ಹಿಟ್ಟನ್ನು ರೋಗಿಯಿಂದ ತುಂಬಿಸಿ. ನೀರನ್ನು ಅರಳೀಮರಕ್ಕೆ ಹಾಗೂ ಹಿಟ್ಟನ್ನು ಹಸುವಿಗೆ ತಿನ್ನಿಸಿ. ಇದನ್ನು 3 ದಿನಗಳ ಕಾಲ ಮಾಡಿ.
ರೋಗಿಗಳ ತಲೆಯ ಬಳಿ ಕೇಸರಿ ಮಿಶ್ರಿತ ನೀರನ್ನು ಬೆಳ್ಳಿ ಪಾತ್ರೆಯಲ್ಲಿ ತುಂಬಿಸಿಡಿ. ರಾತ್ರಿ ಇಟ್ಟು ಬೆಳಿಗ್ಗೆ ನೀರನ್ನು ಗಿಡಕ್ಕೆ ಹಾಕಿ.
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿಸಬೇಕು. ಅವನು ಸೇವಿಸುವ ನೀರು ಮತ್ತು ಔಷಧಿಯನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು.
ಚರ್ಮದ ಆರೈಕೆಗೆ ಬೇವು ಮತ್ತು ಅಲೋವೆರಾ ಮಿಕ್ಸ್ ಮಾಡಿ ಹಚ್ಚಿದರೆ ಏನಾಗುತ್ತದೆ ಗೊತ್ತಾ?
ಹಾಗೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಔಷಧಿ ಮತ್ತು ಹಣ್ಣುಗಳನ್ನು ದಾನ ಮಾಡಬೇಕು. ಇದರಿಂದ ರೋಗ ದೂರವಾಗುತ್ತದೆ.