
ಪುರಾಣಗಳಲ್ಲಿ ನಿಮ್ಮ ಇಷ್ಟದೇವರನ್ನು ಮೆಚ್ಚಿಸಲು ಸುಲಭವಾದ ಮತ್ತು ಉತ್ತಮವಾದ ಮಾರ್ಗವೆಂದರೆ ಜಪಮಾಲೆಯನ್ನು ಪಠಿಸುವುದು. ಆದರೆ ಜಪಮಾಲೆಯಲ್ಲಿ ಹಲವು ವಿಧಗಳಿವೆ. ಅದರ ಮೂಲಕ ದೇವರನ್ನು ಆಹ್ವಾನ ಮಾಡಲಾಗುತ್ತದೆ. ಹಾಗಾಗಿ ಯಾವ ದೇವರನ್ನು ಮೆಚ್ಚಿಸಲು ಯಾವ ಜಪಮಾಲೆಯನ್ನು ಪಠಿಸಬೇಕು ಎಂಬುದನ್ನು ತಿಳಿಯಿರಿ.
ಗಣೇಶ : ಶ್ರೀಗಣೇಶ ಮತ್ತು ದೇವಗುರು ಬ್ರಹಸ್ಪತಿ ಅರಿಶಿನ ಮಾಲೆಯನ್ನು ಜಪಿಸಿದರೆ ಸಂತೋಷಗೊಳ್ಳುತ್ತಾರೆ. ಇದನ್ನು ಮಕ್ಕಳ ಸಾಧನೆಗಾಗಿ ಜಪಿಸಲಾಗುತ್ತದೆ. ಕಾಳಿ ಮಾತೆಯನ್ನು ಆಹ್ವಾನಿಸಲು ಕಪ್ಪು ಅರಿಶಿನ ಅಥವಾ ನೀಳಿ ಕಮಲದ ಮಾಲೆಯನ್ನು ಜಪಿಸಿ.
ಶಿವ : ಶಿವನನ್ನು ಮೆಚ್ಚಿಸಲು ರುದ್ರಾಕ್ಷಿ ಮಾಲೆಯನ್ನು ಶಿವ ಮಂತ್ರದೊಂದಿಗೆ ಜಪಿಸಿ. ಇದರಿಂದ ನಿಮ್ಮ ಇಷ್ಟಾರ್ಥ ಈಡೇರುತ್ತದೆ.
ಮಾತೆ ಅಂಬಾ : ಮಾತೆ ಅಂಬೆಯನ್ನು ಹರಳುಗಳ ಮಾಲೆಯೊಂದಿಗೆ ಜಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಲಭಿಸುತ್ತದೆ.
ಈ ರಾಶಿಯಲ್ಲಿ ಜನಿಸಿದವರ ಮೇಲೆ ಕೇತುವಿನ ನೆರಳು ಬೀಳುತ್ತದೆಯಂತೆ…!
ಮಾತೆ ದುರ್ಗಾ : ದುರ್ಗೆಯನ್ನು ಮೆಚ್ಚಿಸಲು ಕೆಂಪು ಶ್ರೀಗಂಧದ ಮಾಲೆ ಅಥವಾ ರಕ್ತ ಚಂದನದ ಮಾಲೆಯನ್ನು ಜಪಿಸಿ. ಹಾಗೇ ಶ್ರೀಕೃಷ್ಣನ ಜಪಿಸಲು ಬಿಳಿ ಚಂದನದ ಮಾಲೆಯನ್ನು ಬಳಸಿ.
ಸೂರ್ಯದೇವ : ಸೂರ್ಯದೇವನ ಅನುಗ್ರಹ ಪಡೆಯಲು ಮಾಣಿಕ್ಯ ಅಥವಾ ಬಿಲ್ವ ಮರದ ಎಲೆಗಳನ್ನು ಜಪಿಸಿ. ಇದರಿಂದ ಪಿತೃದೋಷ ಪರಿಹಾರವಾಗುತ್ತದೆ.
ಲಕ್ಷ್ಮಿ ದೇವಿ : ಲಕ್ಷ್ಮಿದೇವಿಯನ್ನು ಅನುಗ್ರಹ ಪಡೆಯಲು ತುಳಸಿ ಮತ್ತು ಶ್ರೀಗಂಧದ ಮಾಲೆಯನ್ನು ವಿಷ್ಣವಿನ ಮಂತ್ರದೊಂದಿಗೆ ಜಪಿಸಿ.
ಸರಸ್ವತಿ : ಸರಸ್ವತಿಯನ್ನು ಒಲಿಸಿಕೊಳ್ಳಲು ಸ್ಪಟಿಕ ಮಾಲೆಯನ್ನು ಜಪಿಸಿ. ಇದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ.