Kannada Duniya

Garuda Purana: ಇಂತಹ ಜೀವನ ‘ಸಂಗಾತಿ’ ಸಿಕ್ಕರೆ ಜೀವನ ನರಕವಾಗುತ್ತದೆಯಂತೆ…!

ಭಾರತೀಯ ಧಾರ್ಮಿಕ ಗ್ರಂಥಗಳಲ್ಲಿ ಮಾನವ ಕಲ್ಯಾಣದ ಬಗ್ಗೆ ಬಹಳಷ್ಟು ಹೇಳಲಾಗಿದೆ. ಹಾಗೇ ಗರುಡ ಪುರಾಣದ ಬಗ್ಗೆ ಮಾತನಾಡುವುದಾದರೆ ಇದು ಜೀವನ, ಸಾವು ಮತ್ತು ಮರಣಾನಂತರದ ಸನ್ನಿವೇಶಗಳನ್ನು ವಿವರಿಸುತ್ತದೆ. ಅಲ್ಲದೇ ಜಪ, ತಪ್ಪಸ್ಸು, ಯಜ್ಞ, ಹವನ, ಪುಣ್ಯ, ಪಾಪಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ಮಾನವನ ಸಂಬಂಧದ ಬಗ್ಗೆಯೂ ಹೇಳಲಾಗಿದೆ.

ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯನ್ನು ಪದೇ ಪದೇ ನಿಂದಿಸಿದರೆ , ಅವರನ್ನು ಕೀಳಾಗಿ ಕಂಡರೆ, ತನ್ನ ಜವಾಬ್ದಾರಿಗಳನ್ನು ಪೂರೈಸದಿದ್ದರೆ ಅಂತಹ ಸಂಗಾತಿಯಿಂದ ದೂರವಿರುವುದೇ ಉತ್ತಮ. ಅಂತವರು ಜೀವನದಲ್ಲಿ ಸಂಗಾತಿಗೆ ಅವಕಾಶ ನೀಡುವುದಿಲ್ಲ ಬದಲಾಗಿ ಜೀವನದಲ್ಲಿ ತೊಂದರೆಗಳನ್ನೇ ನೀಡುತ್ತಾರೆ.

ಒಬ್ಬ ಸಂಗಾತಿ ದಾರಿ ತಪ್ಪಿದ್ದರೆ ಅವರನ್ನು ಸರಿಯಾದ ದಾರಿಯಲಿ ನಡೆಯಲು ತಿಳಿಸಿ ಹೇಳಬೇಕು. ಅವರು ತಮ್ಮನ್ನು ತಾವು ಸರಿಪಡಿಸಿಕೊಳ್ಳಲು ಬಿಡಬೇಕು. ಒಂದು ವೇಳೆ ಅವರು ಬದಲಾಗಲಿಲ್ಲ ಎಂದಾದರೆ ಅವರಿಂದ ದೂರವಿರುವುದೇ ಉತ್ತಮ.

ಕನಸನಲ್ಲಿ ಹುಡುಗಿಯರು ನೃತ್ಯ ಮಾಡುವುದು ಕಂಡರೆ ಏನಾಗುತ್ತದೆಯಂತೆ ಗೊತ್ತಾ?

ಯಾವುದೇ ವ್ಯಕ್ತಿ ತನ್ನ ಕುಟುಂಬ ಮಾತ್ರವಲ್ಲ ಸಂಗಾತಿಯ ಕುಟುಂಬವನ್ನು ಗೌರವಿಸಬೇಕು. ಒಂದು ವೇಳೆ ಒಬ್ಬರು ಮತ್ತೊಬ್ಬರು ಕುಟುಂಬದವರನ್ನು ಅವಮಾನಿಸುತ್ತಿದ್ದರೆ ಅಂತಹ ಸಂಗಾತಿ ನಿಮ್ಮನ್ನು ಸಂತೋಷವಾಗಿಡಲು ಸಾಧ್ಯವಿಲ್ಲ. ಅಂತವರಿಂದ ಜೀವನವೇ ನರಕವೆನಿಸುತ್ತದೆ. ಹಾಗಾಗಿ ಅಂತವರಿಂದ ದೂರವಿರುವುದೇ ಉತ್ತಮ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...