
ಚಾಣಕ್ಯರು ತನ್ನ ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಶಾಂತಿಯನ್ನು ಪಡೆಯಬಹುದು. ಜೀವನದಲ್ಲಿ ಶತ್ರುಗಳು ನಾವು ಏಳಿಗೆ ಹೊಂದುವುದನ್ನು ತಡೆಯುತ್ತಾರೆ. ಹಾಗಾಗಿ ಅಂತಹದು ಆಗದಂತೆ ತಡೆಯಲು ನೀವು ಈ ಸಲಹೆ ಪಾಲಿಸಿ.
-ಹಣ ಸಂಪಾದಿಸಲು ತಪ್ಪು ಮಾರ್ಗಗಳನ್ನು ಆಯ್ಕೆ ಮಾಡಬೇಡಿ. ಇದರಿಂದ ಶತ್ರುಗಳು ನಿಮ್ಮನ್ನು ಹಿಂದಕ್ಕೆ ತಳ್ಳುವ ಅವಕಾಶ ಪಡೆಯುತ್ತಾರೆ. ನಿಮ್ಮ ಇಮೇಜ್ ಅನ್ನು ಹಾಳುಮಾಡಲು ಪ್ರಯತ್ನಿಸುತ್ತಾರೆ.
-ನಿಮ್ಮ ನಡೆತೆಯಲ್ಲಿ ವಿನಮ್ರತೆ ಇರಲಿ. ನಿಮ್ಮ ಮಾತಿನಲ್ಲಿ ಸಿಹಿ ಇರಲಿ. ಇದರಿಂದ ಶತ್ರುಗಳು ಹುಟ್ಟಿಕೊಳ್ಳುವುದಿಲ್ಲ. ಯಾಕೆಂದರೆ ನಿಮ್ಮ ಗುಣಗಳಿಂದ ನಿಮ್ಮ ಮೇಲೆ ಬೇರೆಯವರಿಗೆ ಪ್ರೀತಿ ಹುಟ್ಟುತ್ತದೆ.
-ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ನಿಮ್ಮ ಹಣದ ಕೊರತೆಯನ್ನು ದೂರಮಾಡಬಹುದು. ಮತ್ತು ಶತ್ರುಗಳಿಂದಾಗುವ ಹಾನಿಯಿಂದ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
ಮಧುಮೇಹಿಗಳಾಗಿದ್ದರೆ ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ…!
-ಬುದ್ದಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಹಣವನ್ನು ಸಂಗ್ರಹಿಸಲು ಮತ್ತು ಸರಿಯಾದ ಸ್ಥಳದಲ್ಲಿ ಹಣವನ್ನು ಬಳಸಲು ಕಲಿಯಿರಿ. ಇದು ನಿಮ್ಮ ಸಂಪತ್ತನ್ನು ಉಳಿಸುತ್ತದೆ ಮತ್ತು ಶತ್ರುಗಳಿಂದ ನಿಮ್ಮ ಸಂಪತ್ತಿನ ಮೇಲಾಗುವ ಹಾನಿಯನ್ನು ತಪ್ಪಿಸಬಹುದು