Kannada Duniya

ಸಮೃದ್ಧಿ ನೆಲೆಸಲು ಫೆಂಗ್ ಶೂಯಿ ಪರಿಹಾರ ಕ್ರಮಗಳನ್ನು ಅನುಸರಿಸಿ…!

ನಿಮ್ಮ ಜೀವನದಲ್ಲಿ ಪ್ರಗತಿಯನ್ನು ಕಾಣಲು, ಎಲ್ಲಾ ಪ್ರಯತ್ನಗಳ ನಂರತವೂ ನೀವು ಯಶಸ್ವಿಯಾಗಲು ಸಾಧ್ಯವಾಗದಿದ್ದರೆ ಫೆಂಗ್ ಶುಯಿನಲ್ಲಿ ಉಲ್ಲೇಖಿಸಲಾದ ಕುದುರೆಯ ಪ್ರತಿಮೆ ಅಥವಾ ಫೋಟೊವನ್ನು ಈ ರೀತಿಯಲ್ಲಿ ಮನೆಯಲ್ಲಿ ಸ್ಥಾಪಿಸಿ.

ಧನಾತ್ಮಕ ಶಕ್ತಿಗಾಗಿ : ಮನೆಯಲ್ಲಿ ಆಗಾಗ ಸದಸ್ಯರ ನಡುವೆ ಜಗಳ, ನಷ್ಟ, ಅನಾರೋಗ್ಯಕರ ಸಮಸ್ಯೆ ಕಾಡುತ್ತಿದ್ದರೆ ಅದನ್ನು ಹೋಗಲಾಡಿಸಲು ಕುದುರೆಯ ಪ್ರತಿಮೆಯನ್ನು ಮುಖ್ಯದ್ವಾರದ ಕಡೆಗೆ ಮುಖ ಮಾಡಿ ಸ್ಥಾಪಿಸಿ.

ಉತ್ತಮ ವೈವಾಹಿಕ ಜೀವನಕ್ಕಾಗಿ : ಕುದುರೆ ವಿಗ್ರಹವನ್ನು ಸ್ಥಾಪಿಸುವುದರಿಂದ ಪತಿಪತ್ನಿಯರ ನಡುವೆ ಜಗಳ ಕಡಿಮೆಯಾಗುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಆದರೆ ಮಲಗುವ ಕೋಣೆಯಲ್ಲಿ ಕುದುರೆಯ ಪ್ರತಿಮೆಯನ್ನು ಸ್ಥಾಪಿಸಬೇಡಿ.

ಒಳ್ಳೆಯ ಕೆಲಸಕ್ಕಾಗಿ : ಉದ್ಯೋಗದಲ್ಲಿ ಪ್ರಗತಿ ಕಾಣಲು ಮನೆಯ ಉತ್ತರ ದಿಕ್ಕಿನಲ್ಲಿ ಕುದುರೆ ಪ್ರತಿಮೆಯನ್ನು ಸ್ಥಾಪಿಸಿ. ಇದರಿಂದ ಮನೆಯ ಸದಸ್ಯರು ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಲಾಭ ಪಡೆಯುತ್ತಾರೆ.

ಸಂಬಂಧವನ್ನು ಹೊಂದುವ ಮುನ್ನ ನಿಮ್ಮನ್ನು ನೀವು ಈ ರೀತಿಯಾಗಿ ‘ಪ್ರಶ್ನಿಸಿ’

ವ್ಯಾಪಾರದಲ್ಲಿ ಯಶಸ್ಸು : ಅಂಗಡಿಯ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಕುದುರೆ ಪ್ರತಿಮೆ ಅಥವಾ ಫೋಟೊವನ್ನು ಸ್ಥಾಪಿಸಿ. ಇದು ವ್ಯಾಪಾರವನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...