Kannada Duniya

ಶನಿಯ ದೋಷ ನಿವಾರಣೆಯಾಗುತ್ತದೆ ವಾಸ್ತು ಕ್ರಮವನ್ನು ಪಾಲಿಸಿದರೆ…!

ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಒಂಭತ್ತು ಗ್ರಹಗಳು ಪ್ರಭಾವ ಬೀರುತ್ತವೆ. ಜಾತಕದಲ್ಲಿ ಈ ಗ್ರಹಗಳು ದುರ್ಬಲವಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಶನಿ ಗ್ರಹವು ಎಲ್ಲಾ ಗ್ರಹಗಳಿಗಿಂತ ವಿಶೇಷ ಸ್ಥಾನವನ್ನು ಪಡೆಯುತ್ತದೆ. ಶನಿಯ ಅನುಗ್ರಹದಿಂದ ಸಂತೋಷ ಪ್ರಾಪ್ತಿಯಾಗುತ್ತದೆಯೋ ಹಾಗೇ ಆತನ ಕೆಟ್ಟ ದೃಷ್ಟಿಯಿಂದ ಸಮಸ್ಯೆಗಳು ಉದ್ಭವಿಸುತ್ತದೆ. ಹಾಗಾಗಿ ಶನಿಯ ದೋಷವನ್ನು ನಿವಾರಿಸಲು ಈ ವಾಸ್ತು ಕ್ರಮವನ್ನು ಪಾಲಿಸಿ.

-ಶನಿಯ ದೋಷದ ಪರಿಣಾಮ ಕಡಿಮೆ ಮಾಡಲು ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಇಡಬಾರದು ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಮುಳ್ಳಿನ ಸಸ್ಯಗಳ ಪ್ರಭಾವದಿಂದ ಶನಿಯ ಹಿಂಸಾತ್ಮಕ, ಕ್ರೂರತನಕ್ಕೆ ಬಲಿಯಾಗುತ್ತಾರೆ.

-ಶನಿ ದೋಷವನ್ನು ತಪ್ಪಿಸಲು ಶನಿವಾರದಂದು ಹೊಸ ಬಟ್ಟೆಯನ್ನು ಖರೀದಿಸಬಾರದು. ಮತ್ತು ಅದನ್ನು ಧರಿಸಬಾರದು. ಇದು ಶನಿ ದೋಷಕ್ಕೆ ಕಾರಣವಾಗುತ್ತದೆ.

-ಹಳೆಯ ಬಟ್ಟೆಗಳನ್ನು ದೀನದಲಿತರಿಗೆ ದಾನ ಮಾಡಿದರೆ ಶನಿಗೆ ಸಂತೋಷವಾಗುತ್ತದೆ. ಇದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ.

ಮನೆಯ ಈ ವಾಸ್ತು ಸರಿಯಾಗಿದ್ದರೆ ನಿಮ್ಮ ಅದೃಷ್ಟ ಬದಲಾಗುತ್ತದೆಯಂತೆ

-ಮನೆಯಲ್ಲಿ ತುಳಸಿಗಿಡವನ್ನು ನೆಟ್ಟು ಪೂಜಿಸಿದರೆ ಶನಿಯ ದೋಷವನ್ನು ತೆಗೆದುಹಾಕುತ್ತದೆ. ತುಳಸಿ ಗಿಡವನ್ನು ಮುಖ್ಯ ಬಾಗಿಲಿನ ಕಡೆಗೆ ಈಶಾನ್ಯ ದಿಕ್ಕಿನಲ್ಲಿಡಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...