Kannada Duniya

ಮನೆಯಲ್ಲಿ ನವಿಲು ಗರಿಯನ್ನು ಇರಿಸಿದರೆ ಈ ವಾಸ್ತು ದೋಷ ನಿವಾರಣೆಯಾಗುತ್ತದೆಯಂತೆ…!

ವಾಸ್ತು ಶಾಸ್ತ್ರದ ಪ್ರಕಾರ ಪ್ರಕೃತಿಯ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಮಾನವ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ದೇವದೇವರುಗಳು ಪ್ರಕೃತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿ ಶ್ರೀಕೃಷ್ಣನು ನವಿಲುಗರಿಯನ್ನು ತಲೆಯಲ್ಲಿ ಧರಿಸಿದ್ದಾನೆ. ಇಂತಹ ವಿಶೇಷವಾದ ನವಿಲುಗರಿಯನ್ನು ಮನೆಯಲ್ಲಿಟ್ಟರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮನೆಯಲ್ಲಿ 2 ನವಿಲುಗರಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದರಿಂದ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತದೆ. ಸಂಬಂಧದಲ್ಲಿ ಸಿಹಿ ತರುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ.

ನಿಮ್ಮ ಮನೆಯ ಬಾಗಿಲು ಸರಿಯಾದ ದಿಕ್ಕಿನಲ್ಲಿ ಇರದಿದ್ದರೆ ಇದರಿಂದ ವಾಸ್ತು ದೋಷ ಕಾಡುತ್ತದೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಬಳಿ ಗಣೇಶನ ವಿಗ್ರಹವನ್ನು ಸ್ಥಾಪಿಸಿ ಮೂರು ನವಿಲುಗರಿಯನ್ನು ಇಡಿ. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ.

ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೋಗ್ಯ ಸುಧಾರಿಸಲು ನೀವು ಮಲಗುವ ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟುಕೊಳ್ಳಿ. ಇದರಿಂದ ನೀವು ಬಹಳ ಬೇಗನೆ ಚೇತರಿಸಿಕೊಳ್ಳುತ್ತೀರಿ.

ಆಂಜನೇಯ ಸ್ವಾಮಿ ಯನ್ನು ಪೂಜಿಸಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು…!

ಮನೆಯಲ್ಲಿ ಹಣದ ಸಮಸ್ಯೆ ಕಾಡುತ್ತಿದ್ದರೆ ಶುಕ್ಲ ಪಕ್ಷದಂದು ಎರಡು ನವಿಲುಗರಿಗಳನ್ನು ಕನಿಷ್ಠ 5 ಅಡಿ ಎತ್ತರದಲ್ಲಿ ಇರಿಸಿ. ಇದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...