Kannada Duniya

ಫೆಬ್ರವರಿ 20ಕ್ಕೆ ಕುಂಭ ರಾಶಿಗೆ ಬುಧ ಗ್ರಹದ ಪ್ರವೇಶ; ಈ ರಾಶಿಯವರು ಪ್ರಗತಿ ಕಾಣಲಿದ್ದಾರಂತೆ

ಬುಧ ಅತ್ಯಂತ ಚಿಕ್ಕ ಗ್ರಹ ಮತ್ತು ಬುದ್ಧಿವಂತಿಕೆಯ ಸಂಕೇತ. ಬುಧಗ್ರಹವು ಫೆಬ್ರವರಿ 20ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಈ ರಾಶಿಯವರು ಜೀವನದಲ್ಲಿ ಪ್ರಗತಿ ಕಾಣುತ್ತಾರಂತೆ.

ಕುಂಭ ರಾಶಿ : ನಿಮ್ಮ ಸಂಪತ್ತು ಹೆಚ್ಚಾಗಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರ ನಡೆಸಲು ಮುಂದಾಗುವವರಿಗೆ ಇದು ಉತ್ತಮ ಸಮಯ. ನಿಮ್ಮ ಆರೋಗ್ಯ ಸುಧಾರಿಸಲಿದೆ.

ಮಿಥುನ ರಾಶಿ : ನೀವು ವ್ಯಾಪಾರದಲ್ಲಿ ದ್ವಿಗುಣ ಲಾಭವನ್ನು ಪಡೆಯುತ್ತೀರಿ. ನಿಮ್ಮ ಹಣ ಹೆಚ್ಚಾಗಲಿದೆ. ನೀವು ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ನೀವು ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗವಹಿಸಬಹುದು.

ಮಕರ ರಾಶಿ : ನೀವು ಹಠಾತ್ ಹಣದ ಲಾಭವನ್ನು ಪಡೆಯುತ್ತೀರಿ. ನಿಮ್ಮ ದೈನಂದಿನ ಆದಾಯವು ಹೆಚ್ಚಾಗಲಿದೆ. ನೀವು ಈ ಸಮಯದಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಈ ಸಮಯದಲ್ಲಿ ನಿಮ್ಮ ಯಾವುದೇ ಮಾತು ಇತರರ ಮೇಲೆ ಪ್ರಭಾವ ಬೀರಲಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...