Kannada Duniya

ನಿಮ್ಮ ಮಗುವಿನ ಆರೋಗ್ಯವನ್ನು ಈ ರೀತಿಯಾಗಿ ಕಾಳಜಿ ಮಾಡಿ ನೋಡಿ….!

ಮಕ್ಕಳು ದಪ್ಪಗಾಗಬೇಕು ಹಾಗೂ ಆರೋಗ್ಯದಿಂದ ಇರಬೇಕು ಎಂದಾದರೆ ಈ ಕೆಲವು ವಸ್ತುಗಳನ್ನು ನಿಮ್ಮ ಮಕ್ಕಳ ಆಹಾರದಲ್ಲಿ ಸೇರಿಸಿ. ಮಕ್ಕಳಿಗೆ ಅಗತ್ಯ ಇರುವ ಎಲ್ಲಾ ಪೋಷಕಾಂಶಗಳನ್ನು ನೀಡುವ ಕೆಲವು ಆಹಾರಗಳು ಇಲ್ಲಿವೆ.

ಮಕ್ಕಳಿಗೆ ಮೊಟ್ಟೆ ಸೇವಿಸಲು ಕೊಡಿ. ಇದು ಅವರ ಆರೋಗ್ಯಕ್ಕೆ ಅಗತ್ಯವಾದ ಸ್ನಾಯು ಹಾಗೂ ದೇಹದ ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ.

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಕ್ಕರೆಯ ಬದಲು ಜೇನುತುಪ್ಪ ನೀಡಿ. ಇದರಿಂದ ಕೆಮ್ಮು ನೆಗಡಿ ಅಂತ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಅವರಿಗೆ ಅಗತ್ಯವಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳು ದೊರೆಯುತ್ತವೆ.

ಅದೇ ರೀತಿ ಮಕ್ಕಳಿಗೆ ಹಾಲು ಕುಡಿಯಲು ಕೊಡಿ. ಡೈರಿ ಉತ್ಪನ್ನಗಳಾದ ಮೊಸರು ಪನ್ನೀರ್, ಚೀಸ್ ಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರುವುದರಿಂದ ಇದು ಆರೋಗ್ಯಕರವಾದ ರೀತಿಯಲ್ಲಿ ಮಗುವಿನ ತೂಕವನ್ನು ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ಪ್ರಮಾಣದ ಹೆಚ್ಚಿದೆಯೇ…? ನೀವೇ ಪರೀಕ್ಷಿಸಿ…!

ಇನ್ನು ಮಕ್ಕಳ ಕೈಗೆ ಚಾಕಲೇಟ್ ನೀಡುವ ಬದಲು ಒಣ ಹಣ್ಣುಗಳನ್ನು ನೀಡಿ. ಬಾದಾಮಿ ಗೋಡಂಬಿ ಅಂಜೂರದ ಹಣ್ಣುಗಳು ಮಕ್ಕಳಲ್ಲಿ ಆರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...