
ಪ್ರತಿಯೊಬ್ಬರು ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಆಗ ದೇವಸ್ಥಾನದಲ್ಲಿ ಪುರೋಹಿತರು ದೇವರ ಪ್ರಸಾದವಾಗಿ ಹೂವನ್ನು ನೀಡುತ್ತಾರೆ. ಇದನ್ನು ನೀವು ದೇಹದ ಈ ಭಾಗದಲ್ಲಿ ಇಟ್ಟುಕೊಂಡರೆ ಒಳ್ಳೆಯದಂತೆ.
ಶಿವ ಪುರಾಣದ ಪ್ರಕಾರ ದೇವಸ್ಥಾನದಲ್ಲಿ ಪುರೋಹಿತರು ಹೂವನ್ನು ನೀಡಿದಾಗ ಅದನ್ನು ಕಣ್ಣುಗಳಿಗೆ ಒತ್ತಿಕೊಂಡರೆ ಒಳ್ಳೆಯದು. ಇದರಿಂದ ದೇವರಿಗೆ ಸಂತೋಷವಾಗಿ ಅನುಗ್ರಹಿಸುತ್ತಾನೆ. ನಂತರ ಅದನ್ನು ಹೃದಯದ ಬಳಿ ಇರಿಸಿ ಆನಂತರ ಕಿವಿಯ ಮೇಲೆ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆಯಂತೆ.
ಈ ವಸ್ತುಗಳನ್ನು ಬಳಸಿ ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಿ….!
ನಂತರ ಹೂಗಳನ್ನು ಹರಿಯುವ ನದಿಯಲ್ಲಿ ಹಾಕಿದರೆ ಒಳ್ಳೆಯದು. ಅಥವಾ ಅದನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಕಟ್ಟಿ ನೀವು ಹಣವಿಡುವಂತಹ ಸ್ಥಳದಲ್ಲಿ ಇರಿಸಿ. ಇದರಿಂದ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗುತ್ತದೆಯಂತೆ.