Kannada Duniya

ಜಾತಕದಲ್ಲಿ ಈ ಯೋಗವನ್ನು ಹೊಂದಿರುವವರು ಉದ್ಯೋಗ, ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ…!

ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನಕ್ಕೆ ಹೆಚ್ಚಿನ ಮಹತ್ವವಿದೆ. ಜೀವನದಲ್ಲಿ ನಡೆಯುವ ಘಟನೆಗಳು ಜಾತಕದ ಗ್ರಹಗಳಿಗೆ ಸಂಬಂಧಿಸಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದರಂತೆ ಜಾತಕದಲ್ಲಿ ಈ ಗ್ರಹಗಳ ಸಂಯೋಜನೆಯಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಂತೆ.

ಜಾತಕದಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಬಲಿಷ್ಠರಾಗಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯುವ ಯೋಗ ಪ್ರಾಪ್ತಿಯಾಗುತ್ತದೆ. ಇದಲ್ಲದೇ ಶುಕ್ರ ಮತ್ತು ಗುರುವಿನ ಪಾತ್ರವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನವು ಸರ್ಕಾರಿ ಕೆಲಸವನ್ನು ಸಹ ಸೂಚಿಸುತ್ತದೆ. ಮಂಗಳ ಬಲವಾಗಿದ್ದರೆ ಸೇನೆ ಅಥವಾ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆಯುತ್ತದೆ.

ಅದೇ ಸಮಯದಲ್ಲಿ ಶುಕ್ರನು ಮಂಗಳನೊಂದಿಗೆ ಬಲವಾದ ಸ್ಥಾನದಲ್ಲಿದ್ದಾಗ ವ್ಯಕ್ತಿಯು ಸರ್ಕಾರಿ ಉದ್ಯೋಗದಲ್ಲಿ ಅಧಿಕಾರಿಯಾಗುತ್ತಾನೆ.

ಕನಸಿನಲ್ಲಿ ಹಲ್ಲು ಮುರಿಯುವುದು ನೋಡಿದರೆ ಏನಾಗುತ್ತದೆ ಗೊತ್ತಾ?

ಹಾಗೇ ಜಾತಕದಲ್ಲಿ 6ನೇ, 7ನೇ, 10ನೇ ಮತ್ತು 11ನೇ ಮನೆಗೆ ರಾಹು ಸಂಬಂಧ ಹೊಂದಿದ್ದರೆ ಆ ವ್ಯಕ್ತಿಯು ಯಶಸ್ವಿ ರಾಜಕಾರಣಿಯಾಗುತ್ತಾನೆ. ಹಾಗೇ ರಾಜಕೀಯದಲ್ಲಿ ಯಶಸ್ಸನ್ನು ಸಾಧಿಸಲು 10ನೇ ಮನೆಯಲ್ಲಿ ಉಚ್ಚಗ್ರಹವನ್ನು ಹೊಂದಿರುವುದು ಅವಶ್ಯಕ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...