
ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಎದುರಾದ ಕಷ್ಟಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಗಣೇಶನನ್ನು ಬುಧವಾರದಂದು ಪೂಜಿಸಲಾಗುತ್ತದೆ. ಹಾಗಾಗಿ ಈ ದಿನ ಗಣೇಶನಿಗೆ ಈ ಎಲೆಗಳನ್ನು ಅರ್ಪಿಸಿದರೆ ಅಡಚಣೆಗಳು ದೂರವಾಗುತ್ತದೆಯಂತೆ.
ಗಣೇಶನಿಗೆ ಎಕ್ಕದ ಎಲೆಗಳನ್ನು ಅರ್ಪಿಸಿ. ಆ ವೇಳೆ “ಓಂ ವಿನಾಯಕಾಯ ನಮಃ” ಎಂಬ ಮಂತ್ರವನ್ನು ಪಠಿಸಿ.
ಹಾಗೇ ಬಿಲ್ವ ಪತ್ರೆಯನ್ನು ಗಣೇಶನಿಗೆ ಅರ್ಪಿಸಿದರೆ ಒಳ್ಳೆಯದು. ಆ ವೇಳೆ “ಓಂ ಉಮಾ ಪುತ್ರಾಯೈ ನಮಃ “ ಮಂತ್ರವನ್ನು ಜಪಿಸಿ.
ಶನಿಗ್ರಹವು ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ರಾಶಿಚಕ್ರದ ಚಿಹ್ನೆಗಳಿಗೆ ಅಡ್ಡಿಯಾಗಬಹುದು…ಎಚ್ಚರ…!
ಗರಿಕೆ ಹುಲ್ಲುಗಳು ಗಣೇಶನಿಗೆ ಪ್ರಿಯವಾದುದು. ಇದನ್ನು ಅರ್ಪಿಸುವಾಗ “ಓಂ ಗಜಮುಖಾಯ ನಮಃ” ಮಂತ್ರವನ್ನು ಪಠಿಸಿ.
ದಾತುರಾ ಎಲೆಗಳನ್ನು ಗಣೇಶನಿಗೆ ಅರ್ಪಿಸುವಾಗ “ಓಂ ಹರಸುತನೇ ನಮಃ” ಎಂದು ಪಠಿಸಿ.
ಗಣೇಶನಿಹೆ ಹಲಸಿನ ಎಲೆಗಳನ್ನು ಅರ್ಪಿಸುವಾಗ “ಲಂಬೋದರಾಯೈ ನಮಃ” ಮಂತ್ರವನ್ನು ಪಠಿಸಿ.