ಒಬ್ಬ ವ್ಯಕ್ತಿ ಕನಸಿನಲ್ಲಿ ಏನೇನು ನೋಡುತ್ತಾನೆ. ಆ ಕನಸುಗಳಿಗೆ ಹಲವು ಅರ್ಥಗಳಿವೆ. ಕನಸುಗಳು ಭವಿಷ್ಯದಲ್ಲಿ ಏನಾಗುತ್ತದೆ ಎಂಬುದರ ಸೂಚನೆಯನ್ನು ನೀಡುತ್ತದೆ. ಹಾಗಾಗಿ ಕನಸುಗಳು ಒಳ್ಳೆಯ ಮತ್ತು ಕೆಟ್ಟ ಅರ್ಥವನ್ನು ಹೊಂದಿದೆ. ಹಾಗಾಗಿ ಈ ಕನಸುಗಳು ನಿಮಗೆ ಕಾಣಿಸಿದರೆ ನಿಮಗೆ ಶೀಘ್ರದಲ್ಲಿಯೇ ಹಣ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿಸುತ್ತದೆ.
ಕನಸಿನಲ್ಲಿ ಗಿಳಿ ಅಥವಾ ಮುಂಗುಸಿ ಕಾಣಿಸಿಕೊಂಡರೆ ಶೀಘ್ರದಲ್ಲಿಯೇ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ ಎಂದರ್ಥವನ್ನು ಸೂಚಿಸುತ್ತದೆ.
ಕನಸಿನಲ್ಲಿ ಯಾರಾದರೂ ಅಥವಾ ನೀವು ಮಾವಿನ ಹಣ್ಣು ಸೇವಿಸುವುದು ಕಂಡುಬಂದರೆ ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಹಣ ಸಿಗುವ ಸಾಧ್ಯತೆ ಇದೆ.
ಕನಸಿನಲ್ಲಿ ನೀವು ಉರಿಯುತ್ತಿರುವ ದೀಪವನ್ನು ನೋಡಿದರೆ ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದರ್ಥ.
ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಜಲಪಾತಗಳು ಇಲ್ಲಿವೆ ನೋಡಿ…!
ಕನಸಿನಲ್ಲಿ ಹಸು ಸಗಣಿಹಾಕುತ್ತಿರುವುದು ಕಂಡರೆ ಲಕ್ಷ್ಮಿ ಶೀಘ್ರದಲ್ಲಿಯೇ ನಿಮ್ಮ ಮನೆಗೆ ಬರುತ್ತಾಳೆ ಎಂಬುದನ್ನು ತಿಳಿಸುತ್ತದೆ.
ಕನಸಿನಲ್ಲಿ ಈಜುವುದು ಅಥವಾ ಮರ ಹತ್ತುವುದು ಕಂಡರೂ ಇದು ಕೂಡ ಹಣ ಪಡೆಯುವ ಸಂಕೇತವಾಗಿದೆ. ನಿಮ್ಮ ಹಣಕಸಿನ ತೊಂದರೆ ದೂರವಾಗಲಿದೆ.