
ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚು ಪೂಜನೀಯ ಸ್ಥಾನವಿದೆ. ಹಿಂದೂಗಳು ತುಳಸಿಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಕರೆಯುತ್ತಾರೆ. ಹಾಗಾಗಿ ಎಲ್ಲರೂ ತಮ್ಮಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ನಿಮ್ಮ ಮನೆಯ ತುಳಸಿ ಗಿಡದ ಸುತ್ತಮುತ್ತ ಈ ವಸ್ತುಗಳನ್ನು ಇಡಬೇಡಿ. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
ತುಳಸಿ ಗಿಡದ ಬಳಿ ಪಾದರಕ್ಷೆ, ಕೊಳಕು ಪಾತ್ರೆಗಳು,ಪೊರಕೆಗಳು ಅಥವಾ ಕಸವನ್ನು ಇಡಬಾರದು. ಹಾಗೇ ತುಳಸಿ ಗಿಡದ ಜೊತೆ ಬೇರೆ ಗಿಡವನ್ನು ನೆಡಬಾರದು. ಇದರಿಂದ ತುಳಸಿ ಗಿಡ ಒಣಗಿ ಹೋಗುತ್ತದೆ. ಇದರಿಂದ ಮನೆಯಲ್ಲಿ ಕಷ್ಟಗಳು ಎದುರಾಗುತ್ತದೆಯಂತೆ.
Coriander Water: ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟವನ್ನು ತಡೆಯುತ್ತದೆಯಂತೆ ಈ ಬೀಜದ ನೀರು…!
ಹಾಗೇ ತುಳಸಿ ಗಿಡದ ಬಳಿ ನೀರು ತುಂಬಿದ ಪಾತ್ರೆಗಳನ್ನು ಇಡಬಾರದಂತೆ. ಆದರೆ ತುಳಸಿ ಗಿಡದ ಬಳಿ ನೀರನ್ನು ಅಥವಾ ಹಾಲನ್ನು ಅರ್ಪಿಸಿದರೆ ಒಳ್ಳೆಯದಂತೆ. ಹಾಗೇ ತುಳಸಿ ಗಿಡಕ್ಕೆ ಸಂಜೆಯ ವೇಳೆ ನೀರನ್ನು ಅರ್ಪಿಸಬೇಡಿ. ಮತ್ತು ತುಳಸಿ ಗಿಡದ ಕೆಳಗೆ ದೀಪವನ್ನು ಹಚ್ಚಬೇಡಿ. ಇದರಿಂದ ಗಿಡಕ್ಕೆ ಹಾನಿಯಾಗುತ್ತದೆ. ಆಗ ಮನೆಗೆ ದಾರಿದ್ರ್ಯ ಆವರಿಸುತ್ತದೆ.