ಲಕ್ಷ್ಮಿದೇವಿ ಸಂಪತ್ತಿಗೆ ಅಧಿದೇವತೆ. ಹಾಗಾಗಿ ಹಣವನ್ನು ಪಡೆಯಲು ಎಲ್ಲರೂ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಆದರೆ ಹಣ ಎಣಿಸುವಾಗ ನಾವು ಈ ತಪ್ಪನ್ನು ಮಾಡಿದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ಇದರಿಂದ ನಿಮಗೆ ಬಡತನ ಆವರಿಸಬಹುದು.
ಆಹಾರ ಪದಾರ್ಥಗಳನ್ನು ಇಡುವಂತಹ ಸ್ಥಳದಲ್ಲಿ ಹಣವನ್ನು ಇಡಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳಬಹುದು.
ಬಡವರಿಗೆ ಹಣವನ್ನು ನೀಡುವಾಗ ಹಣವನ್ನು ಎಸೆಯಬೇಡಿ. ಇದರಿಂದ ಲಕ್ಷ್ಮಿದೇವಿಗೆ ಅವಮಾನವಾಗುತ್ತದೆ. ಇದರಿಂದ ಲಕ್ಷ್ಮಿ ಕೋಪಗೊಳ್ಳಬಹುದು.
ಈ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿದೇವಿ ಅಸಮಾಧಾನಗೊಳ್ಳುತ್ತಾಳಂತೆ..!
ಕೆಲವರು ನೋಟಿಗೆ ಉಗುಳುತ್ತಾರೆ. ಹಾಗೇ ಕೆಲವರು ನೋಟು ಎಣಿಸುವಾಗ ಎಂಜಲು ಬಳಸುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಇದರಿಂದ ನೀವು ಲಕ್ಷ್ಮಿದೇವಿಯ ಕೋಪಕ್ಕೆ ಒಳಗಾಗಬಹುದು.
ಒಂದು ವೇಳೆ ಹಣ ನೆಲದ ಮೇಲೆ ಬಿದ್ದರೆ ಅದನ್ನು ಎತ್ತಿ ನಮಸ್ಕರಿಸಿ ನಂತರ ಪರ್ಸ್ ನಲ್ಲಿಡಬೇಕು. ಇದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ.