
ಶುಭ ಕಾರ್ಯದಲ್ಲಿ ಪೂಜೆ ಇದೆ ಅಂದ್ರೆ ಸಾಕು. ಆರತಿ ತಟ್ಟೆ, ಜಾಗಂಟೆ, ಹೂವು, ಹಣ್ಣು ಇತ್ಯಾದಿ ವಸ್ತುಗಳು ಅವಶ್ಯವಾಗಿ ಬೇಕಾಗುತ್ತೆ.ಅದರಲ್ಲೂ ಈ ಮಾವಿನ ಎಲೆಗಳನ್ನ ಕಳಶದಲ್ಲಿ ಅಥವಾ ತೋರಣ ರೂಪದಲ್ಲಿ ಕಟ್ಟೋದನ್ನ ನೀವು ನೋಡಿರ್ತೀರಾ. ಶಾಸ್ತ್ರಗಳ ಪ್ರಕಾರ ಈ ಎಲೆ ಆಂಜನೇಯನಿಗೆ ಪ್ರಿಯವಂತೆ.
ಹಿಂದೂ ಧರ್ಮದಲ್ಲಿ ಮರಗಳಿಗೂ ಪ್ರಮುಖ ಸ್ಥಾನವಿದೆ. ಅವುಗಳನ್ನ ದೇವರ ರೂಪದಲ್ಲಿ ಆರಾಧಿಸಲಾಗುತ್ತೆ . ಹೆಚ್ಚಿನ ಎಲ್ಲಾ ಮಂಗಳ ಕಾರ್ಯಗಳಲ್ಲಿ ಮಾವಿನ ಎಲೆಯ ಬಳಕೆಯಂತೂ ಇದ್ದೇ ಇರುತ್ತೆ. ಮನೆಯಲ್ಲಿ ಮಾಡೋ ಸಣ್ಣ ಪೂಜೆಯಿಂದ ಹಿಡಿದು ಮದುವೆ ಕಾರ್ಯದವರೆಗೂ ಮಾವಿನ ಎಲೆ ಬಳಕೆ ಬೇಕೇ ಬೇಕು. ಹಿಂದೂ ಧರ್ಮದ ಪ್ರಕಾರ ಮಾವಿನ ಎಲೆಗಳು ಹನುಮಂತನಿಗೆ ಅತ್ಯಂತ ಪ್ರಿಯವಾದದ್ದು. ಹೀಗಾಗಿ ಯಾವ್ಯಾವ ಶುಭ ಕಾರ್ಯಗಳಲ್ಲಿ ಮಾವು ಹಾಗೂ ಮಾವಿನ ಎಲೆಯ ಬಳಕೆಯಾಗುತ್ತೋ ಅಲ್ಲೆಲ್ಲ ಹನುಮನ ಕೃಪೆ ಇದ್ದೇ ಇರುತ್ತೆ.
Astro:ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಒಂದು ಚಮಚ ಉಪ್ಪು
ಹೋಮ – ಹವನಗಳಲ್ಲಿ ಮಾವಿನ ಮರದ ಚಕ್ಕೆ, ತುಪ್ಪವನ್ನ ಬಳಸೋದ್ರಿಂದ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತಂತೆ. ಅಲ್ಲದೇ ಶುಭ ಕಾರ್ಯದ ಸಂದರ್ಭದಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಮಾವಿನ ಎಲೆಯ ತೋರಣ ಕಟ್ಟೋದ್ರಿಂದ ಯಾವುದೇ ವಿಘ್ನಗಳು ಸಂಭವಿಸೋದಿಲ್ಲ. ಆದರೆ ವೈಜ್ಞಾನಿಕವಾಗಿ ಇದಕ್ಕೆ ಇರೋ ಕಾರಣವೇ ಬೇರೆ. ಮಾವಿನ ಮರ ಅತಿ ಹೆಚ್ಚು ಆಮ್ಲಜನಕವನ್ನ ಪೂರೈಸೋ ಗುಣವನ್ನ ಹೊಂದಿದೆ. ಮರದಿಂದ ಎಲೆ ಕಿತ್ತ ಬಳಿಕವೂ ಮಾವಿನೆಲೆ ಆಮ್ಲಜನಕ ಪೂರೈಸಬಲ್ಲದು. ಶುಭ ಕಾರ್ಯ ಅಂದಮೇಲೆ ಮನೆಯಲ್ಲಿ ಜನರ ಸಂಖ್ಯೆ ಜಾಸ್ತಿ. ಹೀಗಾಗಿ ಮಾವಿನೆಲೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕೋದ್ರಿಂದ ಆಮ್ಲಜನಕ ಪೂರೈಕೆ ಹೆಚ್ಚುತ್ತದೆ.