Kannada Duniya

ಮಾರುಕಟ್ಟೆಯ ಅಕ್ಕಿಯಲ್ಲಿರುವ ರಾಸಾಯನಿಕಗಳನ್ನು ನಿವಾರಿಸಲು ಈ ಕ್ರಮ ಪಾಲಿಸಿ

ಮಾರುಕಟ್ಟೆಯಲ್ಲಿ ಹಲವು ವಿಧದ ಅಕ್ಕಿಗಳು ಸಿಗುತ್ತದೆ. ಹಾಗಾಗಿ ಹೆಚ್ಚಿನ ಜನರು ಮಾರುಕಟ್ಟೆಯಿಂದ ಅಕ್ಕಿಯನ್ನು ಖರೀದಿಸಿ ತರುತ್ತಾರೆ. ಆದರೆ ಈ ಅಕ್ಕಿಗಳು ಕೆಡದಂತೆ ಇದಕ್ಕೆ ಕೆಲವು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದನ್ನು ಸೇವಿಸಿದರೆ ಆರೋಗ್ಯ ಕೆಡುತ್ತದೆಯಂತೆ. ಹಾಗಾಗಿ ಅಕ್ಕಿಯನ್ನು ಸ್ವಚ್ಛಗೊಳಿಸಲು ಈ ವಿಧಾನ ಅನುಸರಿಸಿ.

ಯಾವುದೇ ಅಕ್ಕಿಯನ್ನು ಉಪಯೋಗಿಸುವ ಮೊದಲು ಅದನ್ನು ತೊಳೆಯುವುದು ಅನಿವಾರ್ಯವಾಗಿದೆ. ಹಾಗಾಗಿ ಅಕ್ಕಿಯನ್ನು ಮೊದಲು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆದು ಕನಿಷ್ಠ 20 ನಿಮಿಷಗಳ ಕಾಲ ನೆನಸಿಡಿ. ನಂತರ ಅದನ್ನು ಮತ್ತೆ ಶುದ್ಧವಾದ ನೀರನ್ನು ಬಳಸಿ ಚೆನ್ನಾಗಿ 2 ಕೈಗಳಿಂದ ಉಜ್ಜಿ ತೊಳೆಯಿರಿ. ಇದೇ ರೀತಿ ನೀರನ್ನು ಬದಲಾಯಿಸಿ 3-4 ಬಾರಿ ತೊಳೆಯಿರಿ.

ಅಲ್ಲದೇ ಅಕ್ಕಿಯನ್ನು ಹರಿಯುವ ನೀರಿನಲ್ಲಿ ತೊಳೆದರೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆಯಂತೆ. ಹಾಗಾಗಿ ಹರಿಯುವ ನೀರಿನಲ್ಲಿ 2-3 ಬಾರಿ ತೊಳೆಯಿರಿ. ಅಲ್ಲದೇ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಬೇಯಿಸಿದರೆ ರಾಸಾಯನಿಕಗಳು ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...