Kannada Duniya

ನೀವು ಬಿಳಿ ಅಕ್ಕಿಯ ಬದಲು ಈ ಆರೋಗ್ಯಕರ ಆಹಾರ ಸೇವಿಸಿ

ಹೆಚ್ಚಿನ ಜನರು ಬಿಳಿ ಅಕ್ಕಿಯ ಅನ್ನವನ್ನು ಸೇವಿಸುತ್ತಾರೆ. ಆದರೆ ಇದು ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಧುಮೇಹ, ಥೈರಾಯ್ಡ್, ಬಿಪಿ ಮುಂತಾದ ಆರೋಗ್ಯ ಸಮಸ್ಯೆಗಳು ಬಿಳಿ ಅಕ್ಕಿಯ ಸೇವನೆಯಿಂದ ಉಂಟಾಗುತ್ತದೆ. ಹಾಗಾಗಿ ಈ ಬಿಳಿ ಅಕ್ಕಿಯ ಸೇವನೆಯನ್ನು ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ.

ಕಂದು ಅಕ್ಕಿ : ಇದು ಒಂದು ಸಂಪೂರ್ಣ ಧಾನ್ಯವಾಗಿದೆ. ಇದರಲ್ಲಿ ಅನೇಕ ಜೀವಸತ್ವಗಳು, ಖನಿಜಗಳಿರುತ್ತದೆ. ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೇ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ.

ಕ್ವಿನೋವಾ : ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಇದು ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದರಲ್ಲಿ ಕಬ್ಬಿಣ, ಫೈಬರ್, ಮೆಗ್ನೀಶಿಯಂ ಸತುವು ಸಮೃದ್ಧವಾಗಿದೆ. ಇದು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಅಕ್ಕಿಯ ಬದಲಾಗಿ ಸೇವಿಸಬಹುದು.

ಬಾರ್ಲಿ : ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...