Kannada Duniya

ಮುಟ್ಟಿನ ಸಮಯದಲ್ಲಿ ಕಾಡುವಂತಹ ಸಿಹಿತಿಂಡಿಗಳ ಬಯಕೆಯನ್ನು ಹತ್ತಿಕ್ಕಲು ಈ ಸಲಹೆ ಪಾಲಿಸಿ

ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರಲ್ಲಿ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಹಾರ್ಮೋನ್ ನಲ್ಲಾಗುವ ಬದಲಾವಣೆ. ಅಲ್ಲದೇ ದೇಹದಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ ಕಡಿಮೆಯಾದಾಗ ಸಿಹಿ ತಿಂಡಿಗಳ ಬಯಕೆ ಹೆಚ್ಚಾಗುತ್ತದೆ. ಇದನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ನಿಮ್ಮಲ್ಲಿ ಸಿಹಿತಿಂಡಿಗಳ ಬಯಕೆಯನ್ನು ನಿಯಂತ್ರಿಸಲು ಪ್ರೋಟೀನ್ ಭರಿತ ಆಹಾರ ಸೇವಿಸಿ. ಇದು ನಿಮ್ಮ ಸಿಹಿ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ನಿಮಗೆ ಶಕ್ತಿಯನ್ನು ಒದಗಿಸುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ. ಬದಲಿಗೆ ಧಾನ್ಯಗಳು, ಡ್ರೈಫ್ರೋಟ್ಸ್, ಮೊಸರು ಮುಂತಾದವುಗಳನ್ನು ಸೇವಿಸಿ.

ಈ ಸಮಯದಲ್ಕಿ ಮಹಿಳೆಯರು ಕ್ಯಾಲ್ಸಿಯಂ ಭರಿತ ಆಹಾರ ಸೇವಿಸಿ. ಯಾಕೆಂದರೆ ಇದು ಸಿರೊಟೋನಿನ್ ಹಾರ್ಮೋನ್ ಮಟ್ಟವನ್ನು ನಿಯಂತ್ರಿಸುತ್ತದೆ. ಅದಕ್ಕಾಗಿ ನೀವು ಹಾಲು ಕುಡಿಯುವುದು ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...