Kannada Duniya

ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಡಯೇರಿಯಾಕ್ಕೆ ಇಲ್ಲಿದೆ ನೋಡಿ ಮನೆಮದ್ದು..!

ಎರಡಕ್ಕಿಂತ ಹೆಚ್ಚು ಬಾರಿ ಮಲವಿಸರ್ಜನೆಗೆ ಹೋಗುವುದಕ್ಕೆ ಅತಿಸಾರ (ಡಯೇರಿಯಾ) ಎನ್ನುತ್ತಾರೆ. ಕರುಳಿನಲ್ಲಿ ದ್ರವಗಳ ಉತ್ಪಾದನೆ ಜಾಸ್ತಿ ಆಗುವುದು ಅಥವಾ ದ್ರವಗಳ ಹೀರುವಿಕೆಯು ಕಡಿಮೆಯಾಗುವುದರಿಂದ ಇದು ಶುರುವಾಗುತ್ತದೆ.

ಹೊಟ್ಟೆ ನೋವಿಗೆ ಇಲ್ಲಿದೆ ನೋಡಿ ‘ಪರಿಹಾರ’

ನೀರಿನಿಂದ ಕೂಡಿದ ಮಲವಿಸರ್ಜನೆ ಆಗುತ್ತಿರುತ್ತದೆ.ಇದರಿಂದ ವಾಂತಿ ಬಂದ ಹಾಗೇ ಆಗುವುದು, ವಾಕರಿಕೆ ಆಗುವುದು, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು. ತೂಕ ಕಡಿಮೆ, ಜ್ವರ, ತಲೆನೋವು, ಹೊಟ್ಟೆಯ ನೋವು, ಆಯಾಸ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಇದು ಚಿಕ್ಕ ಮಕ್ಕಳು, ದೊಡ್ಡವರು ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ.

ಕೆಲವೊಂದು ಮನೆಮದ್ದುಗಳ ಮೂಲಕ ಇದನ್ನು ಸರಿ ಮಾಡಿಕೊಳ್ಳಬಹುದು.

ಚೆನ್ನಾಗಿ ನೀರು ಕುಡಿಯಿರಿ: ಅತೀ ಹೆಚ್ಚು ಬಾರಿ ಮಲವಿಸರ್ಜನೆ ಮಾಡುವುದರಿಂದ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ದೇಹ ಎಲೆಕ್ಟ್ರೋಲೈಟ್ಸ್ ಅನ್ನು ಕಳೆದುಕೊಳ್ಳುತ್ತದೆ. 1 ಲೀಟರ್ ನೀರಿಗೆ ½ ಟೀ ಸ್ಪೂನ್ ಉಪ್ಪು, 6 ಟೀ ಸ್ಪೂನ್ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಈ ನೀರನ್ನು ಕುಡಿಯುತ್ತಾ ಇರಬೇಕು.ಆದರೆ ಯಾವುದೇ ಕಾರಣಕ್ಕೂ ಆಲ್ಕೋಹಾಲ್, ಕಾರ್ಬೋನೇಟೆಡ್ ಪಾನಿಯಗಳನ್ನು ಸೇವಿಸಬೇಡಿ.

ಸರಿಯಾದ ಆಹಾರ ಸೇವಿಸಿ: ಇನ್ನು ಮೂರು ಹೊತ್ತು ಚೆನ್ನಾಗಿ ತಿನ್ನುವ ಬದಲು, ಸ್ವಲ್ಪ ಸ್ವಲ್ಪವೇ ತಿನ್ನಿ. ಹಣ್ಣು, ಆಲೂಗಡ್ಡೆ, ಗೆಣಸು, ಸೂಪ್, ಬೇಯಿಸಿದ ತರಕಾರಿ, ಪ್ರೋಟೀನ್ ಇಂತಹವುಗಳನ್ನು ಚೆನ್ನಾಗಿ ಸೇವಿಸಿ. ಹಾಗಂತ ಒಂದೇ ಬಾರಿಗೆ ಹೆಚ್ಚು ಸೇವಿಸಬೇಡಿ.

ಈ ಆಹಾರಗಳನ್ನು ತ್ಯಜಿಸಿ:ಬೀನ್ಸ್, ಬ್ರೋಕೋಲಿ, ಕ್ಯಾಬೇಜ್, ಕಾಲಿಫ್ಲವರ್, ಕಾಫಿ, ಕಡಲೆಕಾಳು, ಕಾರ್ನ್, ಐಸ್ ಕ್ರೀಂ, ಹಾಲು. ಟೀ,ಬಟಾಣಿಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಆಹಾರಗಳಲ್ಲಿ ಸೇರಿಸಬೇಡಿ.

Tips for handling Diarrhoea in Adults and foods to have and those to avoid during this time


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...