Kannada Duniya

ನಿಮ್ಮ ಸೊಂಟವನ್ನು ಉತ್ತಮ ಆಕಾರಕ್ಕೆ ತರಲು ಈ ಯೋಗಾಸನ ಅಭ್ಯಾಸ ಮಾಡಿ

ನಿಯಮಿತವಾಗಿ ಯೋಗಾಸನಗಳನ್ನು ಮಾಡುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಹಾಗಾಗಿ ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಯೋಗ ಮಾಡಿ. ಅಲ್ಲದೇ ನಿಮ್ಮ ಸೊಂಟ ಉತ್ತಮ ಆಕಾರಕ್ಕೆ ಬರಲು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ.

ಮಲಾಸನ : ಇದನ್ನು ಮಾಡಲು ನಿಮ್ಮ ಪಾದಗಳನ್ನು ಸೊಂಟಕ್ಕಿಂತ ಸ್ವಲ್ಪ ಅಗಲವಾಗಿ ಇರಿಸಿ ಕುಳಿತುಕೊಳ್ಳಿ. ನಂತರ ಕೈಗಳನ್ನು ಒಟ್ಟುಗೂಡಿಸಿ ಅಂಗೈಯನ್ನು ನಮಸ್ಕಾರ ಭಂಗಿಯಲ್ಲಿ ಜೋಡಿಸಿ. ನಂತರ ಮೊಣಕೈಗಳನ್ನು ಒಳತೊಡೆಗಳ ಮೇಲೆ ನಿಧಾನವಾಗಿ ಒತ್ತಬೇಕು. ಆಮೇಲೆ ಸೊಂಟವನ್ನು ನೆಲಕ್ಕೆ ಹತ್ತಿರ ತರಬೇಕು. ಈ ವೇಳೆ ನಿಮ್ಮ ಬೆನ್ನು ಮೂಳೆ ನೇರವಾಗಿರಿ.

ಉತ್ತನ್ಪಾದಾಸನ : ಇದನ್ನು ಮಾಡಲು ಚಾಪೆಯ ಮೇಲೆ ಮಲಗಿಕೊಂಡು ನಿಮ್ಮ ಎರಡೂ ಕಾಲುಗಳನ್ನು ಒಟ್ಟಿಗೆ ಸೇರಿಸಿ ನಿಧಾನವಾಗಿ ಮೇಲಕ್ಕೆತ್ತಲು ಪ್ರಯತ್ನಿಸಿ. ಕಾಲುಗಳನ್ನು 30ಡಿಗ್ರಿಗಳಿಗೆ ಹೆಚ್ಚಿಸಿ ಮತ್ತು ಅದಕ್ಕೂ ಹೆಚ್ಚು ಮೇಲೆ ಎತ್ತಬೇಡಿ. ನಂತರ ಉಸಿರನ್ನು ಬಿಡುತ್ತಾ ಹಿಂತಿರುಗಿ, ಇದನ್ನು 3 ಬಾರಿ ಮಾಡಿ. ಇದರ ನಂತರ ಕಾಲುಗಳನ್ನು 60 ಡಿಗ್ರಿಗಳವರೆಗೆ ಹೆಚ್ಚಿಸಬೇಕು. ಇದನ್ನು ಸಹ 3 ಬಾರಿ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...