Kannada Duniya

ಹಸಿದ ಹೊಟ್ಟೆಯಲ್ಲಿ ಮಲಗುವುದರಿಂದ ತೂಕ ಕಡಿಮೆಯಾಗುತ್ತದೆಯೇ….?

ಬಿಡುವಿಲ್ಲದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಆಗ ಕೆಲವರು ತೂಕವನ್ನು ಇಳಿಸಿಕೊಳ್ಳದಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಡಯೆಟಿಂಗ್, ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ. ಹಾಗೇ ಕೆಲವರು ರಾತ್ರಿ ಊಟವನ್ನು ತ್ಯಜಿಸುತ್ತಾರೆ. ಹಾಗಾದ್ರೆ ರಾತ್ರಿ ಹಸಿದ ಹೊಟ್ಟೆಯಲ್ಲಿ ಮಲಗುವುದರಿಂದ ತೂಕ ಕಡಿಮೆಯಾಗುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ.

ತಜ್ಞರ ಪ್ರಕಾರ ತೂಕವನ್ನು ಇಳಿಸಿಕೊಳ್ಳಲು ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ಜೊತೆಗೆ ರಾತ್ರಿಯ ಊಟ ಕೂಡ ಮುಖ್ಯ. ಆದರೆ ಕೆಲವರು ತೂಕವನ್ನು ಇಳಿಸಲು ರಾತ್ರಿಯ ಊಟವನ್ನು ತ್ಯಜಿಸುತ್ತಾರೆ.

ಇದರಿಂದ ದೇಹದ ಶಕ್ತಿ ಕಡಿಮೆಯಾಗುತ್ತದೆ. ದೇಹ ಅನಾರೋಗ್ಯಕ್ಕೀಡಾಗುತ್ತದೆ. ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ, ದೇಹದಲ್ಲಿ ವಿಟಮಿನ್ ಗಳ ಕೊರತೆ ಉಂಟಾಗುತ್ತದೆ. ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ರಾತ್ರಿ ಊಟವನ್ನು ತಪ್ಪದೇ ಮಾಡಿ. ಆದರೆ ಕಡಿಮೆ ಆಹಾರ ಸೇವಿಸಿ.

ತೂಕ ನಷ್ಟವಾಗಲು ತಜ್ಞರ ಈ ಸಲಹೆಗಳನ್ನು ಪಾಲಿಸಿ

ತೂಕವನ್ನು ಇಳಿಸಿಕೊಳ್ಳಲು ರಾತ್ರಿಯ ಊಟದಲ್ಲಿ ಸರಿಯಾದ ಪದಾರ್ಥಗಳನ್ನು ಸೇರಿಸಿಕೊಳ್ಳಿ. ಹಾಗಾಗಿ ಧಾನ್ಯಗಳು, ಗಂಜಿ, ಹಸಿರು ಸಲಾಡ್, ಅಕ್ಕಿ ಮತ್ತು ಬೇಳೆಕಾಳುಗಳು,  ಮುಂತಾದವುಗಳನ್ನು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...