
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಅದರ ರುಚಿ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಅದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ.
ಉಪ್ಪಿನಕಾಯಿಯನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆಯಂತೆ. ಏಕೆಂದರೆ ಇದರಲ್ಲಿ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ.
ಉಪ್ಪಿನಕಾಯಿಯಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತದೆಯಂತೆ.
ಹೆಚ್ಚು ಉಪ್ಪಿನಕಾಯಿ ಸೇವಿಸುವುದರಿಂದ ಉರಿಯೂತದ ಸಮಸ್ಯೆಗಳು ಕಾಡುತ್ತದೆಯಂತೆ. ಇದನ್ನು ಹೆಚ್ಚು ಸೇವಿಸಿದರೆ ದೇಹದಲ್ಲಿ ಊತ ಮತ್ತು ನೋವು ಉಂಟಾಗುತ್ತದೆಯಂತೆ.
ಈ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಫಿಟ್ ಆಗಿರುತ್ತಂತೆ ನೋಡಿ…!
ಇದರಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಇದು ದೇಹಕ್ಕೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಬಿಡುವುದಿಲ್ಲ. ಹಾಗಾಗಿ ನಿಮಗೆ ಮೂಳೆಗಳ ಸಮಸ್ಯೆ ಕಾಡುತ್ತದೆಯಂತೆ.