
ವಿಪರೀತ ಚಳಿ ಎಂಬ ಕಾರಣಕ್ಕೆ ರೂಮ್ ಹೀಟರ್ ಬಳಸುತ್ತೀದ್ದೀರಾ? ಹಾಗಿದ್ದರೆ ಈ ಕೆಲವು ಸಂಗತಿಗಳು ನಿಮಗೆ ನೆನಪಿರಲಿ. ಚಳಿಗಾಲದಲ್ಲಿ ರೂಮ್ ಹೀಟರ್ ಬಳಸುವುದರಿಂದ ದೇಹ ಬೆಚ್ಚಗಾಗುತ್ತದೆ ಎಂಬುದೇನೋ ನಿಜ. ಆದರೆ ಇದರಿಂದ ಹಲವು ಅಪಾಯಗಳೂ ಇವೆ.
ಒಣಚರ್ಮ ಹೊಂದಿರುವವರು ಹೀಟರ್ ಬಳಸುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸುತ್ತಾರೆ.
ಇದು ಗಾಳಿಯಲ್ಲಿರುವ ತೇವಾಂಶವನ್ನು ತೆಗೆದುಹಾಕುತ್ತದೆ. ಸೂಕ್ಷ್ಮ ತ್ವಚೆ ಹೊಂದಿರುವವರು ಇದರಿಂದ ಒಣ ತ್ವಚೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಕೋಣೆಯಲ್ಲಿ ಹೀಟರ್ ಉಷ್ಣತೆಯನ್ನು ಜಾಸ್ತಿ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಲು ಕಾರಣವಾಗುತ್ತದೆ. ನೀವು ಕೊಠಡಿಯಿಂದ ಹೊರಬಂದ ಬಳಿಕ ಹೊರಗಿನ ತಾಪನಾನಕ್ಕೆ ಒಗ್ಗಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೀರಿ.
Heartattack in winter: ಚಳಿಗಾಲದಲ್ಲಿ ಹೃದಯಾಘಾತವಾಗದಂತೆ ತಡೆಯುವುದು ಹೇಗೆ…?
ಒಳಗಿನ ಬಿಸಿ ಹಾಗೂ ಹೊರಗಿನ ತಂಪು ವಾತಾವರಣವು ಜ್ವರ-ಶೀತದಂತ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದು ಮಕ್ಕಳು ಪದೇ ಪದೇ ಆನಾರೋಗ್ಯಕ್ಕೆ ಒಳಗಾಗಲು ಕಾರಣವಾದೀತು. ಕೆಲವೊಮ್ಮೆ ಹೀಟರ್ ನಿಂದ ಹೊರಬರುವ ಕಾರ್ಬನ್ ಮೋನಾಕ್ಸೈಡ್ ಕೋಣೆಯ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಹಾಗಾಗಿ ಹೀಟರ್ ಬಳಸುವ ಮೊದಲು ಆದಷ್ಟು ಎಚ್ಚರಿಕೆ ವಹಿಸಿದೆ ಒಳ್ಳೆಯದು.