ದೇಹ ಆರೋಗ್ಯವಾಗಿರಲು ಸರಿಯಾದ ಆಹಾರ ಸೇವಿಸುವುದು ಮಾತ್ರವಲ್ಲ ನಿಯಮಿತವಾಗಿ ವ್ಯಾಯಾಮ ಕೂಡ ಮಾಡಬೇಕು. ಸೈಕ್ಲಿಂಗ್ ಮಾಡುವುದು ಒಂದು ಉತ್ತಮ ವ್ಯಾಯಾಮವಾಗಿದೆ. ಇದು ದೇಹವನ್ನು ಆರೋಗ್ಯವಾಗಿಡುತ್ತದೆ. ಆದರೆ ಎಲ್ಲರೂ ಸೈಕ್ಲಿಂಗ್ ಮಾಡಬಾರದು. ಇದರಿಂದ ಸಮಸ್ಯೆಯಾಗುತ್ತದೆ.
ನಿಯಮಿತವಾಗಿ ಸೈಕ್ಲಿಂಗ್ ಮಾಡುವುದು ಹೃದಯವನ್ನು ಆರೋಗ್ಯವಾಗಿಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೂ ಉತ್ತಮ. ಇದು ಆತಂಕ, ಒತ್ತಡವನ್ನು ನಿವಾರಿಸುತ್ತದೆ.
ನಿಮ್ಮ ಈ ಆಹಾರ ಪದ್ಧತಿಯಿಂದ ಮೆದುಳು ದುರ್ಬಲವಾಗುತ್ತದೆಯಂತೆ….!
ಆದರೆ ಕೀಲು ನೋವಿನ ಸಮಸ್ಯೆ ಇರುವವರು ಸೈಕ್ಲಿಂಗ್ ಮಾಡಬಾರದು. ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗೇ ಅಸ್ತಮಾ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಸೈಕ್ಲಿಂಗ್ ಮಾಡಬಾರದು.