Kannada Duniya

ಸುಕ್ಕುಗಟ್ಟಿದ ಕೂದಲು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ…!

ಕೂದಲು ತೇವಾಂಶವನ್ನು ಕಳೆದುಕೊಂಡಾಗ ಅದು ಸುಕ್ಕುಗಟ್ಟುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಇಂತಹ ನಿಮ್ಮ ಸುಕ್ಕುಗಟ್ಟಿದ ಕೂದಲು ಮೃದುವಾಗಿಸುವುದು ಬಹಳ ಕಷ್ಟ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.

ಸುಕ್ಕುಗಟ್ಟಿದ ಕೂದಲನ್ನು ಮೃದುವಾಗಿಸಲು ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ಬಳಸಿ. ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸ್ವಲ್ಪ ತೆಂಗಿನೆಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.

ಜೇನುತುಪ್ಪ ಮತ್ತು ನಿಂಬೆ ಸುಕ್ಕುಗಟ್ಟಿದ ಕೂದಲನ್ನು ಮೃದುವಾಗಿಸಲು ಸಹಕಾರಿಯಾಗಿದೆ. ಹಾಗಾಗಿ 2 ಚಮಚ ನಿಂಬೆ ರಸಕ್ಕೆ 3 ಚಮಚ ಜೇನುತುಪ್ಪ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ. ಇದನ್ನು ವಾರಕೊಮ್ಮೆ ಮಾಡಿ.

ಅಲೋವೆರಾ ಕೂದಲಿನಲ್ಲಿರುವ ಸುಕ್ಕುಗಳನ್ನು ನಿವಾರಿಸುತ್ತದೆ. ಹಾಗಾಗಿ ಕೂದಲಿನ ಅಲೋವೆರಾ ಲೋಳೆಯನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಕೂದಲನ್ನು ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...