ಉತ್ತಮ ಆರೋಗ್ಯ ನಿಮ್ಮದಾಗಿರಬೇಕು ಎಂದಾದರೆ ದೇಹದ ತೂಕ ನಿಯಂತ್ರಣದಲ್ಲಿರಬೇಕು. ವಯಸ್ಸಿಗೆ ತಕ್ಕಷ್ಟೇ ದೇಹ ತೂಕ ಹೊಂದಿರುವುದು ಕೂಡ ಮುಖ್ಯ. ಆರೋಗ್ಯಕರ ಆಹಾರ ಶೈಲಿ ನಿಮ್ಮ ದೇಹದ ಹಲವು ಸಂಗತಿಗಳನ್ನು ನಿರ್ಧರಿಸುತ್ತದೆ. ಹಾಗಿದ್ದರೆ ಸರಳವಾಗಿ ದೇಹ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ.
ನಡಿಗೆ ನಿಮ್ಮ ದಿನನಿತ್ಯದ ಭಾಗವಾಗಲಿ. ಬೆಳಗಿನ 30 ನಿಮಿಷ ಹಾಗೂ ಸಂಜೆಯ 30 ನಿಮಿಷವನ್ನು ವಾಕಿಂಗ್ ಗೆಂದು ಮೀಸಲಿಡಿ. ಇದು ದೇಹದ ಅನಾವಶ್ಯಕ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಮನೆ ಕೆಲಸಗಳಲ್ಲಿ ತೊಡಗಿಕೊಳ್ಳಿ. ವ್ಯಾಕ್ಯೂಮ್ ಕ್ಲೀನರ್ ಬದಲು ಕಸಪೊರಕೆಯಿಂದ ಗುಡಿಸಿ ಹಾಗೂ ಸ್ವಚ್ಛಗಿನ ಬಟ್ಟೆಯಿಂದ ನೆಲವರೆಸಿ.
ಸೂರ್ಯ ನಮಸ್ಕಾರ ದಂತಹ ಸರಳ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ. ತಜ್ಞರ ಬಳಿ ತರಬೇತಿ ಪಡೆಯಲು ಸಾಧ್ಯವಾಗದಿದ್ದರೆ ಯೂಟ್ಯೂಬ್ ನಲ್ಲಿ ಸಿಗುವ ಸರಳ ವ್ಯಾಯಾಮಗಳನ್ನೇ ಮಾಡಿ ಕಲಿಯಿರಿ.
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳಿಗೆ ಕಾರಣವೇನು ಗೊತ್ತೇ…?
ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ತಾಜಾ ಆಹಾರಗಳಿಗೆ ನಿಮ್ಮ ಊಟದ ಬಟ್ಟಲಲ್ಲಿ ಜಾಗವಿರಲಿ. ಸಲಾಡ್ ಗಳಿಗೆ ಆದ್ಯತೆ ನೀಡಿ.
ನೆನಪಿರಲಿ ತೂಕ ಇಳಿಕೆ ಕೇವಲ ಒಂದೆರಡು ವಾರಗಳಲ್ಲಿ ಸಾಧ್ಯವಿಲ್ಲ, ಕನಿಷ್ಠ ಮೂರು ತಿಂಗಳ ಸತತ ಪ್ರಯತ್ನ ಮಾತ್ರ ನಿಮಗೆ ಫಲ ನೀಡಬಲ್ಲದು.