
ಸಂಬಂಧಗಳನ್ನು ನಿಭಾಯಿಸುವುದು ಬಹಳ ಕಷ್ಟಕರ. ಒಂದು ಸಣ್ಣ ತಪ್ಪುಗಳಿಂದ ಸಂಬಂಧ ಹಾಳಾಗಬಹುದು. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವುದು ಬಹಳ ಕಷ್ಟಕರ. ಆದರೆ ನೀವು ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ಈ ವಿಚಾರಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ.
ಪರಿಸ್ಥಿತಿ ಏನೇ ಇದ್ದರೂ ಕೂಡ ನಿಮ್ಮ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ಯಾಕೆಂದರೆ ನಿಮ್ಮನ್ನು ಅವಮಾನಿಸುವ ಹಕ್ಕು ನಿಮ್ಮ ಸಂಗಾತಿಗಿಲ್ಲ. ಹಾಗಾಗಿ ಪರಸ್ಪರರು ಗೌರವನ್ನು ನೀಡುವುದು ಅವಶ್ಯಕ.
ಕೆಲವರು ಕುಟುಂಬ ಮತ್ತು ವೃತ್ತಿ ಎರಡನ್ನು ನಿಭಾಯಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಕುಟುಂಬ ಮತ್ತು ವೃತ್ತಿಯನ್ನು ಏಕಕಾಲದಲ್ಲಿ ನಿಭಾಯಿಸಲು ಸಾಧ್ಯವಿಲ್ಲ. ಅಂದ ಮಾತ್ರಕ್ಕೆ ನೀವು ಸಂಬಂಧಗಳಿಗೋಸ್ಕರ ವೃತ್ತಿಯನ್ನು ಬಿಡಲು ಹೋಗಬೇಡಿ.
ಈ ಸುಲಭವಾದ ವ್ಯಾಯಾಮಗಳನ್ನು ಮಾಡುವುದರಿಂದ ಕೀಲು ಬಲವಾಗುತ್ತದೆಯಂತೆ…!
ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಿಮ್ಮ ಅಭಿಪ್ರಾಯಗಳ ಜೊತೆ ರಾಜಿ ಮಾಡಿಕೊಳ್ಳಬೇಡಿ. ನಿಮ್ಮ ಸಂಗಾತಿ ನಿಮಗಿಂತ ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿರಬಹುದು. ಅಂದಮಾತ್ರಕ್ಕೆ ನಿಮ್ಮ ಅಭಿಪ್ರಾಯವನ್ನು ಬದಿಗೊತ್ತಿ ನಿಮ್ಮ ಸಂಗಾತಿಯ ಅಭಿಪ್ರಾಯಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ.