
ಹಿಂದಿನ ಕಾಲದಲ್ಲಿ ಊಟವಾದ ತಕ್ಷಣ ವೀಳ್ಯದೆಲೆ ಜಗಿಯುತ್ತಿದ್ದರು. ಇದರ ಹಿಂದೆ ಆರೋಗ್ಯದ ಲಾಭಗಳೂ ಇದ್ದವು ಎಂಬುದು ಬಹುತೇಕರಿಗೆ ತಿಳಿದಿರದ ಸಂಗತಿ. ವೀಳ್ಯದೆಲೆ ಜೊತೆಗೆ ತಂಬಾಕು ಅಥವಾ ತಂಬಾಕಿನ ಉತ್ಪನ್ನಗಳನ್ನು ಬಳಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.
ವೀಳ್ಯದೆಲೆಯಲ್ಲಿ ಅತ್ಯುತ್ತಮ ಜೀರ್ಣಕಾರಿ ಅಂಶವಿದೆ. ಇದು ಉದರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಚಯಾಪಚಯ ಕ್ರಿಯೆಯನ್ನು ಸಲೀಸು ಮಾಡುತ್ತದೆ.
ಅಲ್ಸರ್ ನಂಥ ಸಮಸ್ಯೆಗಳು ನಿಮ್ಮನ್ನು ಕಾಡದಂತೆಯೂ ಇದು ನೋಡಿಕೊಳ್ಳುತ್ತದೆ. ಮಧುಮೇಹವನ್ನೂ ನಿಯಂತ್ರಿಸುತ್ತದೆ. ವಿಪರೀತ ಕೊಬ್ಬಿನ ಆಹಾರ ಸೇವನೆಯಿಂದ ದಪ್ಪವಾಗುವ ದೇಹದ ತೂಕದ ನಿಯಂತ್ರಣಕ್ಕೂ ಇದು ನೆರವಾಗುತ್ತದೆ.
ವ್ಯಾಯಾಮ ಮಾಡುವಾಗ ಆಗುವ ಹಾನಿಯನ್ನು ತಡೆಯಲು ಈ ಸಲಹೆ ಪಾಲಿಸಿ….!
ಗಾಯಗಳ ಮೇಲೆ ವೀಳ್ಯದೆಲೆಯ ರಸವನ್ನು ಹಚ್ಚುವುದರಿಂದ ಗಾಯ ಬಹುಬೇಗ ಒಣಗುತ್ತದೆ. ಇದರ ಸೇವನೆಯಿಂದ ದೇಹದ ಗ್ಲುಕೋಸ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವೂ ಕಡಿಮೆಯಾಗುತ್ತದೆ.