Kannada Duniya

ಲಿಂಬೆರಸ ಕುಡಿಯಬೇಕಾದ ಸಮಯ ಯಾವುದು….?

ಲಿಂಬೆ ರಸ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ ಹಾಗೂ ಹಲವು ಆರೋಗ್ಯಕರ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಹುದು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಸುಳ್ಳಲ್ಲ. ಆದರೆ ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಇದರ ಸೇವನೆ ಮಾಡುವುದರಿಂದ ಮಾತ್ರ ನಿಮಗೆ ಲಾಭ ದೊರೆಯುತ್ತದೆ ಎಂಬುದು ನೆನಪಿರಲಿ.

ಲಿಂಬೆಹಣ್ಣಿನಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ಬಿ, ಫೈಬರ್, ಸಿಟ್ರಿಕ್ ಆಮ್ಲ ಮೊದಲಾದ ಅಂಶಗಳಿವೆ. ಈ ಅ್ಯಂಟಿ ಆಕ್ಸಿಡೆಂಟ್ ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಲವು ರೀತಿಯ ಕ್ಯಾನ್ಸರ್ ಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ.

ನಿಂಬೆ ಪಾನಕದಲ್ಲಿ ಹಲವು ಪೋಷಕಾಂಶಗಳಿದ್ದು ಇದು ತೂಕ ಇಳಿಸುವವರಿಗೂ ನೆರವಾಗುತ್ತದೆ. ಜಂಕ್ ಫುಡ್ ತಿನ್ನುವ ಬಯಕೆಯನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ ಎನ್ನಲಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರ ಹೆಚ್ಚಿನ ಲಾಭ ಪಡೆಯಬೇಕಿದ್ದರೆ ನೀವು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಾನಕದ ರೂಪದಲ್ಲಿ ಸೇವಿಸಬೇಕು.

ಜಿಮ್‌ಗೆ ಹೋಗುವ ಮೊದಲು ಈ ಒಂದು ಕೆಲಸ ಮಾಡಿ, ಇಲ್ಲದಿದ್ದರೆ ಯಾರಿಗಾದರೂ ಕೆಟ್ಟ ಸುದ್ದಿ ಬರಬಹುದು…..!

ಅಂದರೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಜೀರಿಗೆ ಪುಡಿ ಸೇರಿಸಿ, ಲಿಂಬೆರಸ ಸೇರಿಸಿ ಕುಡಿಯಿರಿ. ಒಂದು ಚಮಚದಷ್ಟು ಜೇನು ಸೇರಿಸಿ ಕುಡಿಯುವುದು ಇನ್ನೂ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...