
ಮಧುಮೇಹ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಂಡುಬರುತ್ತಿದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಕಂಡುಬರುತ್ತದೆ. ಇದು ಒಮ್ಮೆ ಬಂದರೆ ಮತ್ತೆ ವಾಸಿಯಾಗುವುದಿಲ್ಲ. ಹಾಗಾಗಿ ಇದನ್ನು ನಿಯಂತ್ರಿಸುವುದು ಅವಶ್ಯಕ. ಆದರೆ ನಿಮಗೆ ರಾತ್ರಿಯ ವೇಳೆ ಈ ಲಕ್ಷಣಗಳು ಕಂಡುಬಂದರೆ ಅದು ಮಧುಮೇಹದ ಸೂಚನೆಯಂತೆ.
ನೀವು ರಾತ್ರಿಯ ವೇಳೆ ಆಗಾಗ ಮೂತ್ರವಿಸರ್ಜನೆ ಮಾಡುತ್ತಿದ್ದರೆ ಅದು ಮಧುಮೇಹದ ಲಕ್ಷಣವಂತೆ. ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾದಾಗ ಕಿಡ್ನಿ ಅದನ್ನು ಸ್ವಚ್ಛಗೊಳಿಸಲು ಶುರುಮಾಡುತ್ತದೆ. ಇದರಿಂದ ನಿಮಗೆ 5-6 ಬಾರಿ ಮೂತ್ರವಿಸರ್ಜನೆಯಾಗುತ್ತದೆ.
ನಿಮ್ಮ ದೇಹದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ದೇಹ ಬೆವರಲು ಶುರು ಮಾಡುತ್ತದೆ. ನೀವು ತಂಪಾದ ಗಾಳಿ ತೆಗೆದುಕೊಳ್ಳುತ್ತಿದ್ದರೂ ನಿಮ್ಮ ದೇಹದಿಂದ ಬೆವರು ಸುರಿಯುತ್ತದೆ.
ನೀವು ಮಲಗಿದಾಗ ನಿಮಗೆ ಉಸಿರಾಟದ ಸಮಸ್ಯೆ ಕಾಡಿದರೆ ಅದು ಮಧುಮೇಹದ ಲಕ್ಷಣವಂತೆ. ಸಕ್ಕರೆ ಮಟ್ಟ ಹೆಚ್ಚಾದಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಈ ಸಮಸ್ಯೆ ಕಾಡುತ್ತದೆಯಂತೆ.
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ದಾಸವಾಳ ಹೂವಿನಿಂದ ಈ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ….!
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ರಾತ್ರಿಯ ವೇಳೆ ನಿಮ್ಮ ಬಾಯಿ ಒಣಗುತ್ತದೆ. ಹಾಗೇ ನಿಮ್ಮ ಪಾದಗಳಲ್ಲಿ ನೋವು ಮತ್ತು ಮರಗಟ್ಟುವಿಕೆ ಕಂಡುಬರುತ್ತದೆಯಂತೆ.