ಅರಿಶಿನದಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ. ಹಾಗಾಗಿ ಅರಿಶಿನವನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅರಿಶಿನ ಚಹಾವನ್ನು ಈ ರೀತಿಯಲ್ಲಿ ತಯಾರಿಸಿ ಸೇವಿಸಿ.
ಅರಿಶಿನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅರಿಶಿನದಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಇದು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಅರಿಶಿನವು ಮಧುಮೇಹಿಗಳಿಗೆ ಸಹಕಾರಿಯಾಗಿದೆ.
ಹಾಗಾಗಿ ಅರಿಶಿನದ ಚಹಾ ತಯಾರಿಸುವಾಗ ಅದಕ್ಕೆ ಅರಿಶಿನದ ಜೊತೆಗೆ ದಾಲ್ಚಿನ್ನಿ, ಕರಿಮೆಣಸು ಮತ್ತು ಶುಂಠಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಫಿಲ್ಟರ್ ಮಾಡಿ ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ.
ನೀವು ಉತ್ತಮ ಮನಸ್ಥಿತಿಯನ್ನು ಹೊಂದಲು ಈ ಯೋಗಾಸನ ಮಾಡಿ….!
ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಲ್ಲದೇ ಶೀತ, ಕಫದ ಸಮಸ್ಯೆಯನ್ನು ದೂರಮಾಡುತ್ತದೆ. ಇದು ಲಿವರ್ ಅನ್ನು ಸ್ವಚ್ಛಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.