Kannada Duniya

ಮೊದಲ ಮಗುವಿನ ಪ್ಲ್ಯಾನ್ ಮಾಡುತ್ತಿದ್ದೀರಾ…? ಈ ಟಿಪ್ಸ್ ಫಾಲೋ ಮಾಡಿ….!

ಮಗು ಮಾಡಿಕೊಳ್ಳಬೇಕು ಎಂದಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ.

ಮೊದಲಿಗೆ ನೀವು ಸಮತೋಲನದ ಆಹಾರ ಸೇವನೆ ಮಾಡಿ. ನಿಮ್ಮ ಆಹಾರಗಳಲ್ಲಿ ಪ್ರೊಟೀನ್, ಖನಿಜಾಂಶ ಹಾಗೂ ಪೌಷ್ಟಿಕಾಂಶಗಳಿರಲಿ. ಹಣ್ಣು, ತರಕಾರಿ, ಕಾಳು, ಧಾನ್ಯಗಳನ್ನು ಧಾರಾಳವಾಗಿ ಸೇವಿಸಿ.

ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿ ಫಲವತ್ತತೆ ಹೆಚ್ಚುತ್ತದೆ. ನಿಯಮಿತವಾದ ವಾಕಿಂಗ್, ಯೋಗಗಳು ನಿಮ್ಮನ್ನು ಆರೋಗ್ಯವಾಗಿಡುತ್ತದೆ ಮತ್ತು ನಿಮ್ಮ ಬಯಕೆಯನ್ನು ಬಹುಬೇಗ ಪೂರೈಸಲು ನೆರವಾಗುತ್ತದೆ.

ಈ ಅವಧಿಯಲ್ಲಿ ಮಾನಸಿಕ ಒತ್ತಡದಿಂದ ದೂರವಿರುವುದು ಕೂಡಾ ಬಹಳ ಮುಖ್ಯ. ಅತಿಯಾದ ಒತ್ತಡ ಹಾರ್ಮೋನ್ ಗಳ ಸಮತೋಲನವನ್ನು ತಪ್ಪಿಸುತ್ತದೆ. ಇದರಿಂದ ಗರ್ಭಿಣಿಯಾಗುವ ಸಂಭವ ಕಡಿಮೆಯಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸಲು ಪ್ರತಿದಿನ ಈ ಯೋಗಾಸನ ಮಾಡಿ….!

ಗರ್ಭಿಣಿಯಾಗಬೇಕು ಎಂಬ ಕಾರಣಕ್ಕೆ ದಿಡೀರ್ ದೇಹ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ ಕಡಿಮೆ ಮಾಡುವುದು ಕೂಡಾ ಒಳ್ಳೆಯದಲ್ಲ. ಆರೋಗ್ಯಕರ ರೀತಿಯಲ್ಲಿ ತೂಕ ನಿರ್ವಹಣೆ ಮಾಡಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...