
ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಈ ಸಮಯದಲ್ಲಿ ಅವರು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕಿರಿಕಿರಿ, ಹೊಟ್ಟೆ ನೋವು, ಸೆಳೆತ ಹಲವು ಸಮಸ್ಯೆಗಳು ಕಂಡುಬರುತ್ತದೆ. ಹಾಗಾಗಿ ಹೊಟ್ಟೆಯ ನೋವಿನ ಸಮಸ್ಯೆಯನ್ನು ಹೋಗಲಾಡಿಸಲು ಈ ಪಾನೀಯ ಸೇವಿಸಿ.
ಒಂದು ಲೋಟ ನೀರಿಗೆ ಮೆಂತ್ಯ ಬೀಜಗಳು, 5 ಪುದೀನಾ ಎಲೆಗಳು, 3 ತುಳಸಿ ಎಲೆಗಳು, ಅರ್ಧ ಚಮಚ ಓಂಕಾಳು, ಅರ್ಧ ಚಮಚ ಜೀರಿಗೆ ಸೇರಿಸಿ ಅದನ್ನು 5 ನಿಮಿಷ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು …!
ಇದು ಮುಟ್ಟಿನ ನೋವನ್ನು ನಿವಾರಿಸುತ್ತದೆ. ಇದರಲ್ಲಿ ಉರಿಯೂತ ನಿವಾರಕ ಗುಣಗಳಿದ್ದು, ಇದು ಹೊಟ್ಟೆ ಊದಿಕೊಳ್ಳುವುದನ್ನು ತಡೆಯುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ಪಿಸಿಓಡಿ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.