Kannada Duniya

ಮಹಿಳೆಯರು ಈ ಸಮಯದಲ್ಲಿ ಖರ್ಜೂರ ಸೇವಿಸಿದರೆ ಏನಾಗುತ್ತದೆ ಗೊತ್ತಾ….?

ಖರ್ಜೂರ ಆರೋಗ್ಯಕರ ಫುಡ್ ಆಗಿದ್ದು, ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕೊಬ್ಬು, ಸೋಡಿಯಂ, ಫೈಬರ್, ನೈಸರ್ಗಿಕ ಸಕ್ಕರೆ, ಪ್ರೋಟೀನ್, ವಿಟಮಿನ್ ಡಿ, ಕಬ್ಬಿಣ, ಮತ್ತು ಪೊಟ್ಯಾಶಿಯಂ ಇರುತ್ತದೆ.

ಇದನ್ನು ಮಹಿಳೆಯರು ಈ ಸಮಯದಲ್ಲಿ ಸೇವಿಸಿದರೆ ತುಂಬಾ ಪ್ರಯೋಜನಕಾರಿಯಾಗಿದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ದಿನಕ್ಕೆ 6 ಖರ್ಜೂರಗಳನ್ನು ಸೇವಿಸುವುದರಿಂದ ಹೆರಿಗೆ ನೋವನ್ನು ಕಡಿಮೆ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಗರ್ಭಕಂಠದಲ್ಲಿ ನಮ್ಯತೆ ಮತ್ತು ಹಿಗ್ಗುವಿಕೆ ಇರುತ್ತದೆ. ಮತ್ತು ನೋವಿನ ಸಮಯದಲ್ಲಿ ಕಡಿಮೆ ನೋವನ್ನು ಎದುರಿಸಬಹುದು. ಇದು ಸಂಶೋಧನೆಯಿಂದ ಸಾಬೀತಾಗಿದೆ.

ಅಲ್ಲದೇ ಖರ್ಜೂರವನ್ನು ಪ್ರತಿದಿನ ಸೇವಿಸುವುದರಿಂದ ಸೋಂಕು ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ. ಯಾಕೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ದೇಹದ ಜೀವಕೋಶಗಳಿಗೆ ರಕ್ಷಣೆ ನೀಡುತ್ತದೆ. ಇದು ಮೆದುಳಿಗೆ ಪ್ರಯೋಜನಕಾರಿಯಾಗಿದೆ.

ಸಸ್ಯಹಾರದ ಬಗೆಗಿನ ಈ ವಿಚಾರಗಳನ್ನು ನಂಬಬೇಡಿ

ಯಾಕೆಂದರೆ ಇದು ನೋವು ನಿವಾರಕ ಗುಣಗಳನ್ನು ಹೊಂದಿದೆ. ಮೆದುಳಿನ ಕೋಶಗಳ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...