Kannada Duniya

ಮಹಿಳೆಯರಿಗೆ ಚರ್ಮದ ಸಮಸ್ಯೆ ಕಾಡಬಾರದಂತಿದ್ದರೆ ಈ ಸಲಹೆ ಪಾಲಿಸಿ ಮುಟ್ಟಿನ ಸಮಯದಲ್ಲಿ…!

ಮಹಿಳೆಯರಿಗೆ ಮುಟ್ಟಿನ ಅವಧಿ ಸಮೀಪ ಬಂದಾಗ ಹಲವಾರು ಸಮಸ್ಯೆಗಳು ಕಾಡುತ್ತದೆ. ಕಾರಣ ಅವರಲ್ಲಿ ಆ ಸಮಯದಲ್ಲಿ ಹಾರ್ಮೋನ್ ನಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ಇದರಿಂದ ಅವರ ಚರ್ಮದ ಮೇಲೆ ಹೆಚ್ಚು ಪರಿಣಾಮ ಉಂಟಾಗುತ್ತದೆ. ಮೊಡವೆಗಳು, ಅಲರ್ಜಿ, ಒಣತ್ವಚೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಗಳು ಕಾಡಬಾರದಂತಿದ್ದರೆ ಈ ಸಲಹೆ ಪಾಲಿಸಿ.

ಮುಟ್ಟಿನ ಸಮಯದಲ್ಲಿ ನಿಮ್ಮ ಮುಖ ಊದಿಕೊಳ್ಳಬಹುದು. ಹಾಗಾಗಿ ಫೇಸ್ ಮಸಾಜ್, ಮುಖ ಸ್ವಚ್ಛಗೊಳಿಸುವುದು, ಕ್ಲೆನ್ಸರ್ ಬಾಮ್ ಬಳಸುವಂತಹ ಕೆಲಸವನ್ನು ಮಾಡಿ. ಇದು ಮುಖವನ್ನು ಸ್ವಚ್ಛವಾಗಿಡುತ್ತದೆ. ಮುಖದ ಊತವನ್ನು ಕಡಿಮೆಯಾಗುತ್ತದೆ.

Green Tea :ಗ್ರೀನ್ ಟೀ ಕುಡಿದರೆ ಲಾಭ ಏನು ಗೊತ್ತಾ?

ಹಾಗೇ ಈ ಸಮಯದಲ್ಲಿ ಗ್ರೀನ್ ಟೀ ಮತ್ತು ಅಲೋವೆರಾ ಜೆಲ್ ಅನ್ನು ಬಳಸಿ. ಗ್ರೀನ್ ಟೀ ಯಿಂದ ಮುಖವನ್ನು ಸ್ವಚ್ಛಗೊಳಿಸಿ ಅಲೋವೆರಾ ಜೆಲ್ ಅನ್ನು ಹಚ್ಚಿ ಮಸಾಜ್ ಮಾಡಿ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು.ಅಲ್ಲದೇ ಮುಟ್ಟಿನ ಸಮಯದಲ್ಲಿ ಹೆಚ್ಚು ಮೇಕಪ್ ಮಾಡಬೇಡಿ. ಇದು ಚರ್ಮದ ಕಿರಿಕಿರಿಯನ್ನುಂಟು ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...