
ಮೊಳಕೆ ಕಾಳುಗಳಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೆಚ್ಚಿನ ಫೈಬರ್ ಇದು ಹೃದಯದ ಆರೋಗ್ಯದಿಂದ ಹಿಡಿದು ತೂಕ ಇಳಿಸುವ ತನಕ ಹಲವು ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ.
ಅಧ್ಯಯನಗಳ ಪ್ರಕಾರ ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗದಿಂದ ದೂರವಿರಬಹುದು. ಅವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಅವುಗಳಲ್ಲಿ ವಿಟಮಿನ್ ಸಿ , ಕೆ, ಹಾಗೂ ಫೋಲೇಟ್ ಅಂಶಗಳು ಸಾಕಷ್ಟಿವೆ. ನೈಸರ್ಗಿಕವಾಗಿ ಕೊಬ್ಬನ್ನು ಕಡಿಮೆ ಮಾಡುತ್ತವೆ, ಹಾಗಾಗಿ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಮೊಳಕೆ ಕಾಳುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದಂಪತಿ ಮಧ್ಯೆ ವೈಮನಸ್ಸು ಮೂಡುವುದು ಇದೇ ಕಾರಣಕ್ಕೆ….!
ಫೈಬರ್ ಅಂಶ ಸಮೃದ್ಧವಾಗಿರುವ ಮೊಳಕೆ ಕಾಳುಗಳು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ದೇಹ ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಅರ್ಧ ಕಪ್ ನಷ್ಟು ಮೊಳಕೆ ಕಾಳುಗಳನ್ನು ಸೇವನೆ ಮಾಡಿ ಬಳಿಕ ಬ್ರೇಕ್ ಫಾಸ್ಟ್ ತಿನ್ನಬಹುದು.