Kannada Duniya

ಮಧುಮೇಹಿಗಳಿಗೆ ಈ ಯೋಗ ತುಂಬಾ ಪ್ರಯೋಜನಕಾರಿಯಾಗಿದೆ

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಅಗತ್ಯ. ಅದಕ್ಕಾಗಿ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಹಾಗಾಗಿ ಪ್ರತಿದಿನ ಈ ಯೋಗಾಸನ ಮಾಡಿ.

ಹಲಾಸನ (ನೇಗಿಲು ಭಂಗಿ) : ನೀವು ಬೆನ್ನಿನ ಮೇಲೆ ಮಲಗಿಕೊಂಡು ನಿಮ್ಮ ಕೈಗಳನ್ನು ನೇರವಾಗಿಟ್ಟು ಅಂಗೈಯನ್ನು ಕೆಳಮುಖವಾಗಿರಿಸಬೇಕು. ಬಳಿಕ ನಿಮ್ಮ ಕಾಲುಗಳನ್ನು ನಿಮ್ಮ ತಲೆಯ ಮೇಲೆ ಕಾಲ್ಬೆರಳು ನೆಲ ಸ್ಪರ್ಶಿಸುವಂತೆ ಇರಿಸಿ. ನಿಮ್ಮ ದೇಹ ಲಂಬವಾಗಿರಲಿ. ಒಂದು ನಿಮಿಷ ಈ ಭಂಗಿಯಲ್ಲಿ ಇರಿ.

ಪರ್ವತ ಭಂಗಿ(ತಡಾಸನ): ನೀವು ನೇರವಾಗಿ ನಿಂತು ಕಾಲುಗಳನ್ನು ಒಟ್ಟಾಗಿ ಇರಿಸಿಕೊಳ್ಳಿ. ನಿಮ್ಮ ಕೈಗಳನ್ನು ನಿಮ್ಮ ದೇಹದ ಬದಿಗಳಲ್ಲಿ ಇರಿಸಿ. ನೇರವಾಗಿ ನೋಡಿ, ಆಳವಾಗಿ ಉಸಿರಾಡಿ. ಬಳಿಕ ನಿಮ್ಮ ತಲೆಯ ಮೇಲೆ ಕೈಗಳನ್ನು ಎತ್ತಿ. ನಿಮ್ಮ ದೇಹವನ್ನು ಮೇಲಕೆತ್ತಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...