
ಮಕ್ಕಳು ಸರಿಯಾಗಿ ನೀರನ್ನು ಕುಡಿಯುವುದಿಲ್ಲ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಇದರಿಂದ ಅವರಿಗೆ ಸರಿಯಾಗಿ ಮಲ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆಯನ್ನು ಪಾಲಿಸಿ.
ಮಕ್ಕಳಿಗೆ ಪ್ರತಿದಿನ ಒಂದು ಬಾಳೆಹಣ್ಣನ್ನು ಉಗುರು ಬೆಚ್ಚಗಿರುವ ಹಾಲಿನೊಂದಿಗೆ ನೀಡಿ. ಇದು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ.
ಹಾಗೇ ಹಾಲಿಗೆ ಅರಿಶಿನ ಅಥವಾ ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ಆಹಾರವನ್ನು ನೀಡಿ. ಇದರಿಂದ ಅವರ ಹೊಟ್ಟೆ ಸ್ವಚ್ಛವಾಗಿರುತ್ತದೆ.
ಮಕ್ಕಳಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಊಟದಲ್ಲಿ ಸಲಾಡ್ ಅಥವಾ ಹಣ್ಣುಗಳನ್ನು ನೀಡಿ.
ನಿಮಗೆ ಯಾವ ಎಣ್ಣೆ ಉತ್ತಮ ಎಂದು ತಿಳಿಯಿರಿ…!
ಹಾಗೇ ಮಕ್ಕಳಿಗೆ ಓಟ್ಸ್, ರಾಗಿ, ರೊಟ್ಟಿ, ಸೂಪ್ ಮುಂತಾದ ವಸ್ತುಗಳನ್ನು ನೀಡಿ. ಅಲ್ಲದೇ ಮಕ್ಕಳಿಗೆ ಬೆಳಿಗ್ಗೆ ನೆನೆಸಿಟ್ಟ ಅಂಜೂರ ಅಥವಾ ಬಾದಾಮಿಯನ್ನು ಹಾಲಿನಲ್ಲಿ ಬೆರೆಸಿ ನೀಡಿ.
ಮಕ್ಕಳಿಗೆ ರಾತ್ರಿ ನೀರಿನಲ್ಲಿ ತ್ರಿಫಲ ಚೂರ್ಣವನ್ನು ಮಿಕ್ಸ್ ಮಾಡಿದರೆ ಹೊಟ್ಟೆ ಸ್ವಚ್ಛವಾಗುತ್ತದೆ.