
ಕೆಲವರಿಗೆ ದೇಹದಲ್ಲಿ ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದು ನಿಮ್ಮ ದೇಹದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಬೆಲ್ಲಿ ಫ್ಯಾಟ್ ಅನ್ನು ಕರಗಿಸಲು ವ್ಯಾಯಾಮ, ಆಹಾರಕ್ರಮಗಳನ್ನು ಅನುಸರಿಸುವುದರ ಜೊತೆಗೆ ಇವೆರಡು ಪದಾರ್ಥಗಳನ್ನು ಮಿಕ್ಸ್ ಮಾಡಿ ಸೇವಿಸಿ.
ಖರ್ಜೂರ ಮತ್ತು ಬಾಳೆಹಣ್ಣು : ಇವು ಹೊಟ್ಟೆಯ ಕೊಬ್ಬನ್ನು ಕಡಿಮ ಮಾಡಲು ಸಹಾಯಮಾಡುತ್ತವೆ. ಹಾಗಾಗಿ ಬಾಳೆಹಣ್ಣು ಮತ್ತು ಖರ್ಜೂರವನ್ನು ಮಿಕ್ಸ್ ಮಾಡಿದ ಪಾನೀಯ ಸೇವಿಸಿ, ಅದಕ್ಕಾಗಿ ಒಂದು ಕಪ್ ಬಾದಾಮಿ ಹಾಲಿಗೆ ಬಾಳೆಹಣ್ಣು, ಒಂದು ಖರ್ಜೂರವನ್ನು ಪೀಸ್ ಮಾಡಿ ಹಾಕಿ ಮತ್ತು 1 ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಮಿಕ್ಸ್ ಮಾಡಿ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.
ಸ್ನಾಯು ನೋವನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ….!
ದಾಲ್ಚಿನ್ನಿ ಮತ್ತು ಜೇನುತುಪ್ಪ : ಇವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿವೆ. ಹಾಗಾಗಿ ಒಂದು ಲೋಟ ನೀರಿಗೆ ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.